Choudeshwari Temple ಶಿವಮೊಗ್ಗ ನಗರದ ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಬಸವಕೇಂದ್ರ ಶಿವಮೊಗ್ಗ ಇವರ ಸಹಯೋಗದಲ್ಲಿ ನ.11ರ ಮಂಗಳವಾರದಂದು ಸಂಜೆ 6:30ರಿಂದ ಚಿಂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ದ ಸ್ವಾಮಿಗಳು, ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ ಶಿವಮೊಗ್ಗ ಇವರು ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಶರಣ ಎನ್.ಗಂಗಾನಾಯ್ಕ, ಅಧ್ಯಕ್ಷರು ಶ್ರೀ ಚೌಡೇಶ್ವರಿ ದೇವಸ್ಥಾನ ಚಾಲುಕ್ಯನಗರ ಇವರು ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿದು ಕಿರಿದೆಂಬ ಶಬ್ದವಡಗಿದರೆ ಆತನೇ ಶರಣ ಎಂಬ ವಿಷಯದು ಕುರಿತು ಶ್ರೀ ಬಸವ ಭೃಂಗೀಶ್ವರ ಸ್ವಾಮಿಗಳು, ಬಿ.ಕೋಡಿಹಳ್ಳಿ ಇವರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.
Choudeshwari Temple ಮುಖ್ಯಅತಿಥಿಗಳಾಗಿ ಕೆ.ಶೇಖರ, ಎ.ಎಸ್.ನಾರಾಯಣ, ಟಿ.ಎಸ್.ಸಿದ್ದೇಶ್, ಜಿ.ಎಸ್.ಅನಂತ ಇವರು ಆಗಮಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಶ್ರೀ ಚೌಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.
Choudeshwari Temple ಶಿವಮೊಗ್ಗ ಚಾಲುಕ್ಯ ನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ಚಿಂತನ ಕಾರ್ತೀಕ ಕಾರ್ಯಕ್ರಮ
Date:
