ಪ್ರತಿಯೊಂದು ಮಗುವೂ ಒಂದು ಕುಟುಂಬ ಅಥವಾ ಕುಟುಂಬದಂತಹ ವಾತಾವರಣಕ್ಕೆ ಅರ್ಹವಾಗಿದೆ ಎಂಬ ನಂಬಿಕೆಯಲ್ಲಿ ನೆಲೆಗೊಂಡಿರುವ ಈ ವರ್ಷದ ಅಭಿಯಾನವು, ವಿಶೇಷ ಅಗತ್ಯವಿರುವ ಮಕ್ಕಳ ಸಾಂಸ್ಥಿಕವಲ್ಲದ ಪುನರ್ವಸತಿಯನ್ನು ಉತ್ತೇಜಿಸುವಲ್ಲಿ ಎಲ್ಲರೂ ಸಹಯೋಗದಿಂದ ಕೆಲಸ ಮಾಡಲು ಕರೆ ನೀಡುತ್ತದೆ. ಈ ಮಕ್ಕಳು ಪ್ರೀತಿ, ಆರೈಕೆ ಮತ್ತು ಬೆಳವಣಿಗೆಯ ಅವಕಾಶಗಳಿಗೆ ಕಡಿಮೆ ಅರ್ಹರಲ್ಲ. ಒಂದು ಕುಟುಂಬವು ಮಗುವಿನ ಸಮಗ್ರ ಬೆಳವಣಿಗೆಗೆ ಅತ್ಯಂತ ಅನುಕೂಲಕರವಾದ ಪೋಷಣೆಯ ವಾತಾವರಣವನ್ನು ಒದಗಿಸುತ್ತದೆ. ಇದು ವಿಶೇಷ ಅಗತ್ಯವಿರುವ ಮಕ್ಕಳು ಸೇರಿದಂತೆ ಎಲ್ಲಾ ಮಕ್ಕಳಿಗೆ ಅವಶ್ಯಕವಾಗಿದೆ ಹಾಗೂ ಹೆಚ್ಚು ಅಂತರ್ಗತ, ಸಹಾನುಭೂತಿ ಮತ್ತು ಸ್ಪಂದಿಸುವ ಈ ದತ್ತು ಪರಿಸರ ವ್ಯವಸ್ಥೆಯನ್ನು ಕಾನೂನು ರೀತಿಯಲ್ಲಿ ಭದ್ರಪಡಿಸಲು ದಿನಾಂಕ: 07-11-2025 ರಿಂದ 10.11.2025 ವರೆಗೆ ಶಿವಮೊಗ್ಗ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ದತ್ತು ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ಮತ್ತು ಪರಿತೆಕ್ತ ಮಕ್ಕಳು ಕಂಡು ಬಂದಲ್ಲಿ 1098 ಮಾಹಿತಿ ನೀಡಲು ಸ್ಟಾಲ್ ಅಳವಡಿಸಲಾಗುತ್ತದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಜಿಲ್ಲೆ
ಮಕ್ಕಳ ದತ್ತು ಪ್ರಕ್ರಿಯೆ ಪ್ರೋತ್ಸಾಹಿಸಲು ಕೃಷಿಮೇಳದಲ್ಲಿ ಮಾಹಿತಿ ಮಳಿಗೆ
Date:
