Shivappa Nayak University of Agriculture and Horticulture ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ಘೋಷಿಸಲಾಗಿದೆ.
ಶಿವಮೊಗ್ಗದಿಂದ ಶ್ರೀ ವೈ.ಕೆ. ಮಹೇಶ್ವರ, ಚಿತ್ರದುರ್ಗದಿಂದ ಶ್ರೀ ಸಿದ್ದೇಶ್ವರ ರೆಡ್ಡಿ, ದಾವಣಗೆರೆಯಿಂದ ಶ್ರೀ ಮಂಜುನಾಥ ಜೆ.ಎಂ. , ಚಿಕ್ಕಮಗಳೂರಿನಿಂದ ಶ್ರೀ ಆಸ್ತಿಕ್ ಎಂ.ಎಸ್, ಕೊಡಗಿನಿಂದ ಶ್ರೀ ಪಿ.ಎ. ನಂದಕುಮಾರ್, ಉಡುಪಿಯಿಂದ ಶ್ರೀ ರಾಮಯ್ಯ ಶೆಟ್ಟಿ, ದಕ್ಷಿಣ ಕನ್ನಡದಿಂದ ಶ್ರೀ ರಾಜೇಶ್ ದೇವರಾಜ್ ಅವರು ಉತ್ತಮ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗದಿಂದ ಶ್ರೀಮತಿ ಲಲಿತಮ್ಮ, ಚಿತ್ರದುರ್ಗದಿಂದ ಶ್ರೀಮತಿ ಸೂರ್ಯ ಕೋಂ. ಶಂಕರ್ , ದಾವಣಗೆರೆಯಿಂದ ಶ್ರೀಮತಿ ಮಂಜುಳಾ ದೇವಿ ಎಸ್, ಚಿಕ್ಕಮಗಳೂರಿನಿಂದ ಶ್ರೀಮತಿ ಇಂದ್ರಮ್ಮ, ಕೊಡಗಿನಿಂದ ಶ್ರೀಮತಿ ಪಂಕಜ ಗಿರೀಶ್ , ಉಡುಪಿಯಿಂದ ಶ್ರೀಮತಿ ಉಷಾ ಎ, ದಕ್ಷಿಣ ಕನ್ನಡದಿಂದ ಶ್ರೀಮತಿ ನಮಿತಾ ಪಿ. ವಿ. ಅವರು ಉತ್ತಮ ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
