University of Agricultural and Horticultural Sciences ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ “ಕೃಷಿ ಮೇಳ 2025” ರಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಉಚಿತವಾಗಿ ಕಾನೂನು ಸಲಹೆ ಮತ್ತು ಕಾನೂನು ಅರಿವನ್ನು ನೀಡುವ ದೃಷ್ಟಿಯಿಂದ ಕಾನೂನು ಸಲಹಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕಾನೂನು ಸಲಹಾ ಕೇಂದ್ರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಎಂ. ಎಸ್. ರವರು ದಿನಾಂಕ 7-11.2025 ರಂದು ಉದ್ಘಾಟಿಸಿದರು. ಈ ಕಾನೂನು ಸಲಹಾ ಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ಪ್ರಾಧಿಕಾರದ ಪ್ಯಾನಲ್ ವಕೀಲರು, ಕಾನೂನು ನೆರವು ಅಭಿರಕ್ಷಕರು ಹಾಗೂ ಸ್ಟೈಫ್0ಡ್ ವಕೀಲರು ಸಾರ್ವಜನಿಕರಿಗೆ ಕಾನೂನು ಸಲಹೆಯನ್ನು ಮತ್ತು ಕಾನೂನು ಅರಿವನ್ನು ನೀಡುವುದರ ಜೊತೆಗೆ ಕಾನೂನು ಸೇವಾ ಪ್ರಾಧಿಕಾರ ನೀಡುವಂತಹ ಸೇವೆಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಪ್ರಾಧಿಕಾರದಿಂದ ನಿಯೋಜಿಸಲಾಗಿದೆ. University of Agricultural and Horticultural Sciences ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾನೂನು ಸಲಹಾ ಕೇಂದ್ರಕ್ಕೆ ಖುದ್ದಾಗಿ ಭೇಟಿಕೊಟ್ಟು ಕಾನೂನು ಸೇವಾ ಪ್ರಾಧಿಕಾರದ ಸೇವೆಗಳ ಬಗ್ಗೆ ಮತ್ತು ಕಾನೂನಿನ ಬಗ್ಗೆ ಅರಿವು ಪಡೆದುಕೊಳ್ಳುವುದರ ಜೊತೆಗೆ ತಮಗಿರುವಂತಹ ಕಾನೂನು ಸಮಸ್ಯೆಗಳ ಬಗ್ಗೆ ಸಲಹೆಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆದಂತಹ ಶ್ರೀ ಸಂತೋಷ ಎಂ. ಎಸ್. ರವರು ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.
University of Agricultural and Horticultural Sciences ಕೃಷಿಮೇಳ-2025 ರಲ್ಲಿ ಸಾರ್ವಜನಿಕರಿಗೆ ಉಚಿತ ಕಾನೂನು ಸಲಹೆ & ಅರಿವು ನೀಡುವ ಚಟುವಟಿಕೆ- ನ್ಯಾ. ಎಂ.ಎಸ್.ಸಂತೋಷ್
Date:
