ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಕೆ. ಸಂಗಮೇಶ್ ಅವರು ಮುಂದಿನ ಚುನಾವಣೆಯಿಂದ ಸ್ಪರ್ಧಿಸುವುದಿಲ್ಲ ಎಂದು ಸಮಾರಂಭದಲ್ಲಿ ಘೋಷಿಸಿದರು.
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ ಬಿಕೆ ಸಂಗಮೆಶ್
ತಮ್ಮ ಪುತ್ರ ಗಣೇಶ್ ಅವರಿಗೆ ಆಶೀರ್ವಾದ ಮಾಡುವ ಮೂಲಕ ಕ್ಷೇತ್ರದ ಜನತೆ ಬೆಂಬಲ ನೀಡಬೇಕೆಂದು ಕಳಕಳಿಯಿಂದ ಮಾತನಾಡಿದರು.
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ನಡೆದ ಪಂಚ ಗ್ಯಾರಂಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸಂಗಮೇಶ್ ಅವರು
ಮುಂದಿನ ಚುನಾವಣೆಯಲ್ಲಿ ನನ್ನ ಮಗ ಗಣೇಶ್ ಅವರಿಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.
B.K. Sangamesh ನಮ್ಮ ಸಹೋದರರು ಹಾಗೂ ಮಕ್ಕಳು ಈಗಾಲೇ ತಿರ್ಮಾನ ಮಾಡಿದ್ದಾರೆ ಎಂದು ಬಿಕೆ ಸಂಗಮೇಶ್ ಹೇಳಿದರು.
ಶಾಸಕ ಸಂಗಮೇಶ್ ಪುತ್ರ ಗಣೇಶ್ ಪ್ರಸ್ತುತ ಭದ್ರಾವತಿ ಪಂಚ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
