Saturday, December 6, 2025
Saturday, December 6, 2025

VISL ಭದ್ರಾವತಿ ಸೈಲ್- ವಿಐಎಸ್ಎಲ್ ನಲ್ಲಿ ಜಾಗೃತಾ ತಿಳುವಳಿಕೆ ಸಪ್ತಾಹ ಆಚರಣೆ

Date:

VISL ವಿಐಎಸ್ ಎಲ್ ನ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಭದ್ರಾವತಿಯ ಶಾಲಾ ವಿದ್ಯಾರ್ಥಿಗಳಿಗಾಗಿ ಪೊಸ್ಟರ್ ಡಿಜೈನ್, ಪ್ರಬಂಧ, ಆಶುಭಾಷಣ, ರಂಗೋಲಿ, ರಸಪ್ರಶ್ನೆ ಮತ್ತು ಚಿತ್ರಕಲೆಯಂತಹ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಲದ ಧ್ಯೇಯವಾಕ್ಯ “ಜಾಗರೂಕತೆ: ನಮ್ಮೆಲ್ಲರ ಜವಾಬ್ದಾರಿಯಾಗಿದೆ“.

ಜಾಗೃತಾ ತಿಳುವಳಿಕೆ ಸಪ್ತಾಹವನ್ನು ಇಸ್ಪಾತ್ ಭವನದ ಮುಂಭಾಗದಲ್ಲಿ ಶ್ರೀಮತಿ ತ್ರಿವೇಣಿಯವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಉದ್ಘಾಟಿಸಲಾಯಿತು, ಶ್ರೀ ರಘುನಾಥ ಬಿ. ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್) ರವರು ಸ್ವಾಗತ ಭಾಷಣ ಮಾಡಿದರು. ಜಾಗೃತಾ ಪ್ರತಿಜ್ಞಾ ವಿಧಿಯನ್ನು ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭಾ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು) ಮತ್ತು ಶ್ರೀ ಕೆ. ಹರಿಶಂಕರ್, ಮಹಾಪ್ರಬಂಧಕರು (ಸುರಕ್ಷತೆ ಮತ್ತು ಅಗ್ನಿಶಾಮಕ ಸೇವೆಗಳು) ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಕ್ರಮವಾಗಿ ಬೋಧಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಭಾರತದ ರಾಷ್ಟ್ರಪತಿಗಳ, ಮಾನ್ಯ ಉಪರಾಷ್ಟçಪತಿಗಳ, ಮಾನ್ಯ ಪ್ರಧಾನಮಂತ್ರಿಗಳ ಮತ್ತು ಕೇಂದ್ರ ಜಾಗೃತ ಕಮಿಷನರ್ ರವರ ಸಂದೇಶಗಳನ್ನು ಶ್ರೀ ಟಿ. ರವಿಚಂದ್ರನ್, ಮಹಾಪ್ರಬಂಧಕರು (ಸೇವೆಗಳು), ಶ್ರೀ ಎಮ್. ಸುಬ್ಬರಾವ್, ಮಹಾಪ್ರಬಂಧಕರು (ಈಎಮ್‌ಡಿ ಮತ್ತು ಸಿ.ಈ ಪ್ಲಾಂಟ್) ಶ್ರೀ ಸುಂದರ ವಡಿವೇಲು, ಮಹಾಪ್ರಬಂಧಕರು (ಐಇಡಿ ಮತ್ತು ನಿರ್ವಹಣೆ) ಮತ್ತು ಡಾ. ಸುಜೀತ್ ಕುಮಾರ್, ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿಗಳು ಕ್ರಮವಾಗಿ ಓದಿದರು.

ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಜೆ. ಜಗದೀಶ, ಅಧ್ಯಕ್ಷರು, ವಿಐಎಸ್ ಎಲ್ ಕಾರ್ಮಿಕರ ಸಂಘ, ಶ್ರೀ ಅಜಯ್ ಡಿ. ಸೋಂಕುವಾರ್, ಅಧ್ಯಕ್ಷರು, ವಿಐಎಸ್ ಎಲ್ಅಧಿಕಾರಿಗಳ ಸಂಘ ಮತ್ತು ಶ್ರೀ ರಘುನಾಥ ಬಿ. ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್) ರವರುಗಳು ಶ್ರೀ ಸರ್ದಾರ್ ವಲ್ಲಭಾಯ್ ಪಟೇಲ್ ಮತ್ತು ಸರ್. ಎಂ. ವಿಶ್ವೇಶ್ವರಯ್ಯರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

VISL ನವೆಂಬರ್ 3 ರಂದು ಭದ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿದ್ದ ಜಾಗೃತಾ ತಿಳುವಳಿಕೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಶ್ರೀ ಉನ್ನೀಕೃಷ್ಣನ್, ಸಹಾಯಕ ಮಹಾಪ್ರಬಂಧಕರು (ಹಣಕಾಸು) ರವರು ಪ್ರಾರ್ಥನಾಗೀತೆಯನ್ನು ಹಾಡಿದರು. ಸೈಂಟ್ ಚಾರ್ಲ್ಸ್ ಆಂಗ್ಲ ಶಾಲೆಯ 4ನೇ ತರಗತಿಯ ವಿಧ್ಯಾರ್ಥಿನಿಯರಾದ ಕು. ಪಾವನಿ ಎಮ್. ನಾಯಕ್ ಮತ್ತು ಕು. ಹರ್ಷಾಲಿಶೆಟ್ಟಿ ತಮ್ಮ ಭರತನಾಟ್ಯದಿಂದ ಪ್ರೇಕ್ಷಕರನ್ನ ಮನರಂಜಿಸಿದರು. ಶ್ರೀ ಹಾಲಸ್ವಾಮಿ (ಕಥೆ ರಚನೆ ಮತ್ತು ನಿರ್ದೆಶನ) ಮತ್ತು ಕಲಾವಿದರಾದ ಶ್ರೀ ಭಾನುಪ್ರಕಾಶ್, ಕು. ಖುಷಿ.ಬಿ, ಶ್ರೀ ರೂಪೇಶ್.ಎಸ್, ಶ್ರೀ ರಾಘವೇಂದ್ರ.ಎಮ್.ಕೆ, ಶ್ರೀ ರಿಜ್ವಾನ್ ಬೇಗ್, ಶ್ರೀ ವಸಂತ್.ಬಿ.ಎಸ್, ಶ್ರೀ ಭಾನುಪ್ರಕಾಶ್ ಬಾಬು, ಮತ್ತು ಶ್ರೀ ಜಗದೀಶ್ ಆಚಾರ್ಯ ಒಳಗೊಂಡ ವಿಐಎಸ್ ಎಲ್ ನ ತಂಡ ನಟಿಸಿದ ‘ಮನ್ವಂತರ’ ಎಂಬ ಕನ್ನಡ ಕಿರು ಚಿತ್ರ/ನಾಟಕವನ್ನು ಪ್ರದರ್ಶಿಸಲಾಯಿತು ಮತ್ತು ವಿವಿಧ ಸ್ಪರ್ದೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.

ಶ್ರೀ ರಘುನಾಥ ಬಿ. ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್) ರವರು 35 ಅಧಿಕಾರಿಗಳಿಗೆ ಉeಒ ಕುರಿತು ತರಬೇತಿ ನೀಡಿದ ವರದಿಯನ್ನು ಓದಿದರು. ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಇಲಾಖೆಯು ಮಾರಾಟಗಾರರ ಸಭೆಯನ್ನು ಆಯೋಜಿಸಿತ್ತು, ಇದರಲ್ಲಿ ಸುಮಾರು 30 ಮಾರಾಟಗಾರರು ಭಾಗವಹಿಸಿದ್ದರು.

ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು ತಮ್ಮ ಮುಖ್ಯ ಅತಿಥಿಗಳ ಭಾಷಣದಲ್ಲಿ ವಿಜಿಲೆನ್ಸ್ನಲ್ಲಿನ ಎಲ್ಲಾ ಪಾಲುದಾರರ ಜವಾಬ್ದಾರಿಗಳನ್ನು “ಜಾಗರೂಕತೆ: ನಮ್ಮೆಲ್ಲರ ಜವಾಬ್ದಾರಿ, ನಿಯಮಗಳನ್ನು ಪಾಲಿಸುವ ಪ್ರಾಮುಖ್ಯತೆ, ಕಂಪನಿಯ ಪಿಸಿಪಿ, ಸಿಡಿಎ ನಿಯಮಗಳಂತಹ ಕಾರ್ಯವಿಧಾನಗಳ ಮಾರ್ಗಸೂಚಿಗಳು” ಎಂಬ ವಿಷಯಕ್ಕೆ ಸಂಬAಧಿಸಿದAತೆ ಒತ್ತಿ ಹೇಳಿದರು.

ಜಾಗರೂಕತೆಯ ಜಾಗೃತಿ ಮೂಡಿಸಲು ಜಾಗೃತ ಘೋಷಣೆಗಳ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಲಾಯಿತು. ಈ ವರ್ಷದ ಧ್ಯೇಯದೊಂದಿಗೆ ಜಾಗೃತ ಸೆಲ್ಫಿ ಬೂತ್, ಉದ್ಯೋಗಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸಿತು.

ಶ್ರೀ ಕೆ.ಎಸ್. ಸುರೇಶ್ ತಮ್ಮ ಭಾಷಣದಲ್ಲಿ, ದೇಶದ ಭವಿಷ್ಯವಾಗಿರುವ ಶಾಲಾ ಮಕ್ಕಳಲ್ಲಿ ಮೌಲ್ಯಗಳು ಮತ್ತು ತತ್ವಗಳನ್ನು ಪೋಷಿಸುವ ಮಹತ್ವವನ್ನು ಒತ್ತಿ ಹೇಳಿದರು.

ಶ್ರೀ ಎಲ್. ಕುಥಲನಾಥನ್, ಸಹಾಯಕ ಮಹಾಪ್ರಬಂಧಕರು (ವಿಜಿಲೆನ್ಸ್) ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು. ವಿಐಎಸ್ ಎಲ್ ನ ವಿಜಿಲೆನ್ಸ್ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...