Karnataka State Pollution Control Board ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಚಿತ್ರದುರ್ಗದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಮುಖಾಮುಖಿ ಎಸ್.ಟಿ. ರಂಗ ತಂಡ (ರಿ), ಶಿವಮೊಗ್ಗ ಅವರಿಗೆ “ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ – 2025” ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿಯನ್ನು ಪರಿಸರ ಸಂರಕ್ಷಣೆ, ಜಾಗೃತಿ ಹಾಗೂ ನಾಟಕ ಕಲೆಯ ಮೂಲಕ ಸಮಾಜದಲ್ಲಿ ಪರಿಸರದ ಅರಿವು ಮೂಡಿಸುವ ಸೇವೆಗೆ ಮಾನ್ಯ ಮಂಡಳಿಯು ಪ್ರದಾನ ಮಾಡಿದೆ.
ಸಂಸ್ಥೆಯ ಪರವಾಗಿ ತಂಡದ ಮಂಜು ರಂಗಾಯಣ ಪ್ರಶಸ್ತಿಯನ್ನು ಸ್ವೀಕರಿಸಿದರು.
Karnataka State Pollution Control Board ಮುಖಾಮುಖಿ ಎಸ್.ಟಿ. ರಂಗ ತಂಡ (ರಿ), ಶಿವಮೊಗ್ಗ ಕಳೆದ ದಶಕದಿಂದ ಪರಿಸರ, ಆರೋಗ್ಯ, ಸಾಕ್ಷರತೆ ಹಾಗೂ ಸಮಾಜಮುಖಿ ವಿಷಯಗಳ ಕುರಿತು ಬೀದಿ ನಾಟಕ ಮತ್ತು ರಂಗಭೂಮಿ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುತ್ತಿದೆ.
