State Bank of India ರಾಷ್ಟ್ರದ ಪ್ರತಿ ಮೂಲೆಗೂ ಬ್ಯಾಂಕಿಂಗ್ ಸೇವೆ ಒದಗಿಸುವ ನಿಟ್ಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಎಲ್ಲೆಡೆ ಶಾಖೆ ತೆರೆದು ಜನರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಬೆಂಗಳೂರು ವಲಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಜೂಹಿ ಸ್ಮಿತಾ ಸಿನ್ಹ ಹೇಳಿದರು.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನ ನೂತನ ಶಾಖೆಯನ್ನು ಸೋಮವಾರ ಸಂಜೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತವು ಆರ್ಥಿಕವಾಗಿ ಪ್ರಗತಿ ಹೊಂದುತ್ತಿರುವ ದೇಶವಾಗಿದೆ. ಆದರೆ ಗ್ರಾಮೀಣ ಜನರ ಜೀವನ ಸ್ಥಿತಿ ಇನ್ನಷ್ಟು ಉತ್ತಮ ಆಗಬೇಕಿದೆ. ಅದಕ್ಕಾಗಿ ಎಲ್ಲಾ ವರ್ಗದ ಜನರಿಗೆ ಬ್ಯಾಂಕಿನ ಮೂಲಕ ಅಗತ್ಯವಾದ ಅನೇಕ ರೀತಿ ಸಾಲ ಸೌಲಭ್ಯ, ಉಳಿತಾಯ, ಠೇವಣಿ ಬಗ್ಗೆ ಜಾಗೃತಿ ಮೂಡಿಸಿ ಪ್ರಗತಿಗೆ ಸಹಕರಿಸಲಾಗುತ್ತಿದೆ. ಸಾರ್ವಜನಿಕರು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶಿವಮೊಗ್ಗ ಪ್ರಾದೇಶಿಕ ವ್ಯಸ್ಥಾಪಕ ಮಧುಗುಲ ವಿಜಯ ಸಾಯಿ ಮಾತನಾಡಿ, ಬ್ಯಾಂಕಿನಲ್ಲಿ ದೊರೆಯುವ ಅನೇಕ ರೀತಿಯ ಸೌಲಭ್ಯಗಳನ್ನು ಜನರು ಬಳಸಿಕೊಂಡು ಪ್ರಗತಿ ಹೊಂದಬೇಕು ಎಂದರು.
ಮಂಗಳೂರಿನ ಉಪ ಪ್ರಧಾನ ವ್ಯವಸ್ಥಾಪಕ ಕೃಷ್ಣ ಮೋಹನ ಮುಚರ್ಲ, ಶಾಖಾ ವ್ಯವಸ್ಥಾಪಕ ಸುರೇಶ್ ನಾಯ್ಕ್, ಸಿಬ್ಬಂದಿ ಎಂ.ಎನ್.ಗುರುರಾಜ್, ರವಿಕಿರಣ, ಬೈಟೆ, ಶ್ರೀನಾಥ್ ರೆಡ್ಡಿ, ಪುಷ್ಪಲತಾ, ಸ್ಥಳೀಯರಾದ ನವೀನ್, ರಾಜಪ್ಪ, ಉಮೇಶ್, ಗಣೇಶ್, ಡಾ.ಸಂಗೀತ ಬಗಲಿ ಹಾಜರಿದ್ದರು.
State Bank of India ಭಾರತೀಯ ಸ್ಟೇಟ್ ಬ್ಯಾಂಕ್ ಎಲ್ಲೆಡೆ ಶಾಖೆ ತೆರೆದು ಜನರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ- ಜೂಹಿ ಸ್ಮಿತಾ ಸಿನ್ಹಾ
Date:
