Thirthahalli News ನವೆಂಬರ್ ೪ ರಂದು ಮಂಗಳವಾರ ತೀರ್ಥಹಳ್ಳಿ ತಾಲ್ಲೂಕಿನ ಆರಗ ಸಹಕಾರ ಸಂಘದ ಭವನದಲ್ಲಿ ಪುರಂದರ ದಾಸರ ಕೀರ್ತನೋತ್ಸವ ಕಾರ್ಯಕ್ರಮ ನಡೆಯಲಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ೩೫ ನೆಯ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪುರಂದರ ದಾಸರ ಕೀರ್ತನೆಗಳನ್ನು ಹಾಡುವ, ವಿಶ್ಲೇಷಣೆ ಮಾಡುವ ಈ ಕಾರ್ಯಕ್ರಮ ಇಡೀ ದಿನ ನಡೆಯಲಿದೆ.
ಕಾರ್ಯಕ್ರಮ ಸಿದ್ದತೆಗಾಗಿ ಪೂರ್ವಭಾವಿ ಸಭೆ ನವೆಂಬರ್ ೧ ರಂದು ಸಂಜೆ ಆರಗದಲ್ಲಿ ನಡೆಯಿತು. ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ಮಾಜಿ ಸಚಿವರು, ಶಾಸಕರಾದ ಆರಗ ಜ್ಞಾನೇಂದ್ರ, ಮುಖಂಡರಾದ ಆರ್. ಮದನ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರಾದ ಸಿರಿಬೈಲು ಧರ್ಮೇಶ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೊಳಿಗೆ ವಾಸಪ್ಪಗೌಡ, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷರಾದ ಕೃಷ್ಣಮೂರ್ತಿ, ಚಂದ್ರಶೇಖರ ನಲ್ಲಿಗದ್ದೆ, ಎಸ್. ಎನ್. ಮಂಜುನಾಥ, ವಿಷ್ಣುಮೂರ್ತಿ ದಾವಣಿಬೈಲು, ಯಡೂರು ರಾಜಾರಾಮ್, ಸಹನಾ ಉಪೇಂದ್ರ, ಡಾ. ಪ್ರೇಮಚಂದ್ರ, ಶಾಂತಕುಮಾರ್, ರಾಜಶೇಖರ ಬೀಸು, ಮಂಜುನಾಥ ಎಸ್. ಎನ್, ಆರಗ, ಭಾರತಿ ಸುರೇಶ್, ಪ್ರಕಾಶ ಭಟ್, ಸಿ. ಬಿ. ಈಶ್ವರ್, ಎಸ್. ವಿ. ಗುರುರಾಜ್, ಜಗದೀಶ್, ಹರಿಣಾಕ್ಷಿ, ಸುರೇಶ್, ನಟರಾಜ್, ಕೇಶವಮೂರ್ತಿ, ಚಂದ್ರಪ್ಪ ಕೆ. ಆರ್., ಅಮೀಶ್,ತಾ. ಕಸಾಪ ಅಧ್ಯಕ್ಷರಾದ ಟಿ. ಕೆ. ರಮೇಶ್ ಶೆಟ್ಟಿ, ಡಾ. ಶ್ರೀಪತಿ ಹಳಗುಂದ, ರಾಜಾರಾಮ್ ಯಡೂರು, ಅಂಬಳಿಕೆ ಗಿರೀಶ್ ಸೇರಿದಂತೆ ಹಲವರು ಭಾಗವಹಿಸಿ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.
ನವೆಂಬರ್ ೪ ರಂದು ಬೆಳಿಗ್ಗೆ ಸುಮಾರು ೯-೩೦ ರ ಹೊತ್ತಿಗೆ ಪೂಜ್ಯರು ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಆರಗದ ವರೆಗೆ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳ ಜೊತೆಯಲ್ಲಿ ಮೆರವಣಿಗೆ, ಆರಗ ಗೇಟ್ ನಿಂದ ಪೂರ್ಣ ಕುಂಭ, ಮಂಗಳವಾದ್ಯ ಗಳೊಂದಿಗೆ ಮೆರವಣಿಗೆ ನಡೆಯಲಿದೆ.
Thirthahalli News ಉದ್ಘಾಟನೆ, ಕೀರ್ತನೋತ್ಸವದ ಕೀರ್ತನ ಗೋಷ್ಠಿ ನಡೆಯಲಿದೆ. ಸಂಜೆ ಕೀರ್ತನೆಗಳನ್ನು ಹಾಡುತ್ತಲೆ ನಮಗೆ ಅರ್ಥವಾಗದ ಒಳಾರ್ಥಗಳನ್ನು ತಿಳಿಸಿ ಕೊಡಲಿದ್ದಾರೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮಿಗಳು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರೊಂದಿಗೆ ನಮ್ಮ ಜಿಲ್ಲೆಯ ಪೂಜ್ಯರ ಜೊತೆಯಲ್ಲಿ ಶ್ರೀ ಮಠದ ಪೂಜ್ಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ಕಳೆದ ಒಂದು ವಾರ ಗಳಿಂದ ಶಿವಮೊಗ್ಗ ಶಾಖಾ ಮಠದ ಪೂಜ್ಯರಾದ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅವರು ಆಮಂತ್ರಣ ವಿತರಿಸಿ ಆಹ್ವಾನಿಸಿದ್ದಾರೆ.
ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಊಟ, ದೂರದಿಂದ ಬರುವ ಎಲ್ಲರಿಗೂ ವಸತಿ ವ್ಯವಸ್ಥೆ, ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲು ವಿವಿಧ ಸಮಿತಿಗಳು, ಅವುಗಳ ಜವಾಬ್ದಾರಿ, ಖರ್ಚು ವೆಚ್ಚ ನಿರ್ವಹಿಸಲು ಸ್ವಾಗತ ಸಮಿತಿ. ವ್ಯವಸ್ಥೆ ನಿರ್ವಹಣೆ ಮಾಡಲು ವಿವಿಧ ಸಮಿತಿಗಳು ಅವುಗಳ ಜವಾಬ್ದಾರಿ ಕುರಿತು ಚರ್ಚೆಮಾಡಿ ತೀರ್ಮಾನ ಮಾಡಲಾಯಿತು. ಕೀರ್ತನೋತ್ಸವ ನವೆಂಬರ್ ೪ ನೇ ಮಂಗಳವಾರ ಬೆಳಿಗ್ಗೆ ಯಿಂದ ಸಂಜೆವರೆಗೆ ನಡೆಯಲಿದೆ.
ಎಲ್ಲರೂ ಭಾಗವಹಿಸಲು ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಕೋರಿದ್ದಾರೆ.
Thirthahalli News ನವೆಂಬರ್ 4 . ಆರಗದಲ್ಲಿ ಪುರಂದರ ಕೀರ್ತನೋತ್ಸವ. ಪೂರ್ವಭಾವಿ ಸಭೆಯಲ್ಲಿ ವಿವಿಧ ಜವಾಬ್ದಾರಿ ಹಂಚಿಕೆ.
Date:
