Dr. Dhananjaya Sarji ಶಿವಮೊಗ್ಗದಲ್ಲಿ ನವೆಂಬರ್ 30 ರಂದು ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ- 25 ,ಮಹಾಸಮರ್ಪಣೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಭಿಯಾನದ ಅಧ್ಯಕ್ಷ ಅಶೋಕ ಜಿ.ಭಟ್ ಅವರು ಕಾರ್ಯಕ್ರಮಕ್ಕೆ ವಿಧಾನಪರಿಷತ್ತಿನ ಸದಸ್ಯ ಡಾ.ಧನಂಜಯ ಸರ್ಜಿ ಅವರನ್ನ ಭೇಟಿಮಾಡಿದರು.
ಮೊದಲಿಗೆ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಾದಪೂರ್ವಕ ಕಳಿಸಿದ್ದ ಶಾಲು ಮತ್ತು ಪುಷ್ಪಹಾರವನ್ನ ಅಶೋಕಭಟ್ ಅವರು ಶಾಸಕ ಡಾ.ಧನಂಜಯ ಸರ್ಜಿ ಅವರಿಗೆ ಭಗವದ್ಗೀತಾ ಅಭಿಯಾನ ಸಮಿತಿ ಪರವಾಗಿ ಅರ್ಪಿಸಿದರು.
ಪೂರ್ವಸಿದ್ಧತೆ ಕುರಿತು
ಸವಿವರವಾಗಿ ಡಾ.ಧನಂಜಯ ಸರ್ಜಿ ಅವರೊಡನೆ ಅಶೋಕ ಭಟ್ ಅವರು ಚರ್ಚಿಸಿದರು.
ನವೆಂಬರ್ 30 ರಂದು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ
ಇಪ್ಪತ್ತು ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.
ಅದರಲ್ಲಿ ಈಗಾಗಲೇ ಗುರುತಿಸಿರುವ ಗುಂಪುಗಳಿಂದ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಸಾಮೂಹಿಕ ಪಠಣವನ್ನ ಅಂದು ಏರ್ಪಡಿಸಲಾಗಿದೆ.
ಹತ್ತುಸಾವಿರ ಶಾಲಾಮಕ್ಕಳು ಈ ಪಠಣದಲ್ಲಿ ತಮ್ಮ ದನಿಸೇರಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬಹುಪಾಲು ಶಾಲಾಮಕ್ಕಳು ಇದರಲ್ಲಿ
ಪಾಲ್ಗೊಳ್ಳಲಿದ್ದಾರೆ.
ಭಗವದ್ಗೀತಾ ಅಭಿಮಾನಿಗಳೂ ಕೂಡ ರಾಜ್ಯ ಎಲ್ಲಾಕಡೆಯಿಂದ ಆಗಮಿಸಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಎಂದು ಅಶೋಕ ಜಿ ಭಟ್ ವಿವರ ಮಾಹಿತಿಯನ್ನ
ಡಾ. ಸರ್ಜಿಯವರ ಗಮನಕ್ಕೆ ತಂದರು.
Dr. Dhananjaya Sarji ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಮಹಾ ಸಮರ್ಪಣೆ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.
ಅಪಾರ ಸಂಖ್ಯೆಯಲ್ಲಿ ಶಾಲಾಮಕ್ಕಳು ಆಗಮಿಸುತ್ತಿರುವುದರಿಂದ ಅವರ ಬಸ್ ಪ್ರಯಾಣದ ಬಗ್ಗೆ ಸೂಕ್ತ ಸುರಕ್ಷತೆ ,ಭದ್ರತೆ ಬಗ್ಗೆ ಆದ್ಯ ಗಮನ ನೀಡಬೇಕು. ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಶುಚಿಯಾದ ಆಹಾರ, ಕುಡಿಯುವ ನೀರು , ಪೆಂಡಾಲ್, ವೇದಿಕೆ, ಆಸನಗಳ ವ್ಯವಸ್ಥೆ ಬಗ್ಗೆ
ಸೂಕ್ತ ಜಾಗೃತಿವಹಿಸಬೇಕು.
ಎಂದು ಕೂಲಂಕಷವಾಗಿ ಚರ್ಚಿಸಿದರು.
ಈ ಕಾರ್ಯಕ್ರಮ ರಾಜ್ಯಮಟ್ಟದಾದ್ದರಿಂದ
ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಎಂದು ಶಾಸಕ ಡಾ.ಧನಂಜಯ ಸರ್ಜಿ ದೀರ್ಘವಾಗಿ ಮಾತುಕತೆಯಲ್ಲಿ ತಮ್ಮ
ಕಾಳಜಿ ಹಂಚಿಕೊಂಡರು.
ಚರ್ಚೆಯಲ್ಲಿ ಅಭಿಯಾನದ ಕಾರ್ಯದರ್ಶಿ ಟಿ.ಜೆ.ಲಕ್ಷ್ಮೀನಾರಾಯಣ, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ
ನಿವೃತ್ತ ತಹಶೀಲ್ದಾರ್
ಕೆ.ಜಿ.ಮಂಜುನಾಥ ಶರ್ಮ ಹಾಗೂ ಕೆಲೈವ್ ನ್ಯೂಸ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ. ಉಪಸ್ಥಿತರಿದ್ದರು.
