ಕಳೆದ ನಾಲ್ಕು ವಾರಗಳಿಂದ ಉಚಿತ ಆರೋಗ್ಯ ತಪಾಸಣೆ ನಡೆಸುತ್ತಿರುವ ನಗರದ ದುರ್ಗಿಗುಡಿಯ ಪ್ರತಿಷ್ಠಿತ ತೃಪ್ತಿ ಹೆಲ್ತ್ ಕ್ಲೀನಿಕ್‌ನಿಂದ ಈ ಬಾರಿ ಬೀದಿಬದಿ ವ್ಯಾಪಾರಿಗಳಿಗೆ ಉಚಿತ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂಎಲ್‌ಸಿ ಬಲ್ಕಿಷ್ ಭಾನು, ತೃಪ್ತಿ ಆಸ್ಪತ್ರೆಯ ಸಂಸ್ಥಾಪಕ ಡಾ. ಚಂದ್ರಶೇಖರ್ ಅವರ ಸೇವೆ ನಿಜಕ್ಕೂ ಮೆಚ್ಚುವಂತಾದ್ದ ಅವರ ಸೇವೆ ಹೀಗೆ ಮುಂದುವರೆಯಲಿ. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಎಲ್ಲ ರಿಗೂ ಉಚಿತವಾಗಿ ಇವರ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಆರೋಗ್ಯ ತಪಾಸಣೆ ನಡೆಯಲಿ ಎಂದು ಹಾರೈಸಿದರು.
ಚಿಕಿತ್ಸೆ ಪಡೆದ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಆಸ್ಪತ್ರೆ ಸಂಸ್ಥಾಪಕ ಡಾ. ಚಂದ್ರಶೇಖರ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಣಿ, ಅಶೋಕ್ ಕುಮಾರ್ ಮತ್ತು ಜಮಿಯ ಮಸೀದಿ ಅಧ್ಯಕ್ಷ ರ‍್ವೀಜ್, ಪ್ರಮುಖರಾದ ಎಂ.ಡಿ. ಸರೀಫ್ ಹಾಗೂ ಮುಜೀಬ್ ಇನ್ನಿತರರಿದ್ದರು.
ಆರ್ಥಿಕವಾಗಿ ಹಿಂದುಳಿದವರಿಗೆ ಸೇವೆ ಉಚಿತವಾಗಿ ಮುಂದುವರೆಯಲಿ,- ಶಾಸಕಿ ಬಲ್ಕೀಷ್ ಬಾನು
Date:
