Kannada Rajyotsava ಶಿವಮೊಗ್ಗ ನಗರದ ಜೈಲ್ ರಸ್ತೆಯ ಸಂಗೊಳ್ಳಿ ರಾಯಣ್ಣ ಕನ್ನಡ ಯುವಕರ ಸಂಘದ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಮ್ ಶ್ರೀಕಾಂತ್ ರವರು ಕನ್ನಡ ಧ್ವಜಾರೋಹಣ ನೆರವೇರಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ. ರಂಗನಾಥ್, ಸಂಗೊಳ್ಳಿ ರಾಯಣ್ಣ ಕನ್ನಡ ಅಧ್ಯಕ್ಷ ಚಂದ್ರು ಗೆಡ್ಡೆ, ಪ್ರಮುಖರಾದ ದಿನೇಶ್ ರಾವ್,ಸಿ ರವಿ , ಎಚ್ ಪಿ ಗಿರೀಶ್, ಎಸ್ ಬಸವರಾಜ್, ದಿವಾಕರ್, ನಾಗರಾಜ್ ಗೆಡ್ಡೆ, ಸಂದೀಪ್, ಮಂಜುನಾಥ್ ,ಚೇತನ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
