Natanam Bala Natya Kendra ಶಿವಮೊಗ್ಗದ ನಟನಂ ಬಾಲ ನಾಟ್ಯ ಕೇಂದ್ರದ ಗುರುಗಳಾದ ಕರ್ನಾಟಕ ಕಲಾಶ್ರೀ, ವಿದ್ವಾನ್ ಡಾ ಕೇಶವ್ ಕುಮಾರ ಪಿಳ್ಳೈ ಅವರ ಕಲಾ ಸೇವೆಯನ್ನು ಗುರುತಿಸಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಸನ್ಮಾನಿಸಿದರು.
ಉಡುಪಿಯ ಮಠದ ಶ್ರೀ ರಾಜಾಂಗಣ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕೇಶವಕುಮಾರ ಪಿಳೈ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಶಾಸ್ತ್ರ ಗ್ರಂಥಗಳೊಂದಿಗೆ ಅಲ್ಲಿನ ಭರತನಾಟ್ಯ ಕಲಾವಿಧರು, ಕಲಾಭಿಮಾನಿಗಳು, ವಿದ್ಯಾರ್ಥಿಗಳು, ಪೋಷಕರನ್ನು ಉಪಸ್ಥಿತರಿದ್ದ ಅಷ್ಟಮಠದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಂತೆಯೇ 23ನೇ ವರ್ಷದ ಭರತಮುನಿ ಜಯಂತೋತ್ಸವದ ಅಂಗವಾಗಿ ಅವರನ್ನು ಸನ್ಮಾನಿಸಲಾಯಿತು.
Natanam Bala Natya Kendra ಶಿವಮೊಗ್ಗ “ನಟನಂ” ಕೇಂದ್ರದ ಗುರು ಡಾ.ಕೇಶವ ಕುಮಾರ ಪಿಳ್ಳೈ ಅವರಿಗೆ ಉಡುಪಿಯಲ್ಲಿ ಸನ್ಮಾನ
Date:
