CM Siddharamaiah ಜನಸಾಮಾನ್ಯರ ಸಮಸ್ಯೆ ಪರಿಹರಿಸಲು 100 ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ವಿಕಾಸಸೌಧದಲ್ಲಿ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಅವರು ಹಮ್ಮಿಕೊಂಡಿದ್ದ “ನೂರು ಕಾನೂನುಗಳು-ನೂರು ಅಭಿಮತಗಳು” ಮೂರು ಸಂಪುಟಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರ ಬಂದ ಮೇಲೆ ಜನತೆಗೆ ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎಚ್.ಕೆ ಪಾಟೀಲ್ ಅವರ ನೇತೃತ್ವದಲ್ಲಿ ಪರಿಣಿತ ತಜ್ಣರ ಅಭಿಮತ ಪಡೆದು ಸುಮಾರು “ನೂರು ಕಾನೂನು”ಗಳನ್ನು ಜಾರಿಗೊಳಿಸಿದ್ದೇವೆ. ನಾವು ಜಾರಿಗೊಳಿಸಿರುವ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಜನಪರವಾಗಿರಬೇಕು. ಜನರಿಗೆ ಪರಿಹಾರವಾಗಿ ಕೆಲಸ ಮಾಡಬೇಕು.ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ. ಈ ಕಾನೂನುಗಳು ಜನರಿಗೆ ಮುಟ್ಟಬೇಕು. ಜನರು ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ಹಿಂದೆ ಮುಖ್ಯಮಂತ್ರಿ ಯಾಗಿದ್ದಾಗ ಮೌಢ್ಯಗಳ ಪ್ರತಿಬಂಧಕಾಜ್ಣೆ ಕುರಿತ ಕಾನೂನು ಜಾರಿ ಮಾಡಲಾಗಿತ್ತು. ಆದರೆ ಆ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ ಎಂಬ ವಸ್ತುಸ್ಥಿತಿ ಕಾಣುತ್ತಿದ್ದೇವೆ. ಕಾನೂನು ತಿಳುವಳಿಕೆ ಇರುವವರೆ ಮೌಢ್ಯ ಕಂದಾಚಾರವನ್ನು ಆಚರಿಸುತ್ತಾರೆ. ವಿದ್ಯಾವಂತರೆ ಮೂಡನಂಬಿಕೆ ಪಾಲಿಸುತ್ತಾರೆ. ಇನ್ನೂ ಜಾತಿಪದ್ಧತಿ ಜೀವಂತವಾಗಿದೆ. ಶೇ.76.ರಷ್ಟು ಜನ ವಿದ್ಯಾವಂತರಾಗಿದ್ದಾರೆ. ಶೇ.24 ರಷ್ಟು ಅವಿದ್ಯಾವಂತರಿದ್ದಾರೆ. ಎಲ್ಲರೂ ವಿದ್ಯಾವಂತರಾಗಿ ಅಸಮಾನತೆ ಹೋಗಲಾಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ” ಶಾಸನಾತ್ಮಕ (ಶಾಸನ ರಚನೆ) ಪ್ರಾರೂಪಣಾ ಕೈಪಿಡಿ ” ಬಿಡುಗಡೆ ಮಾಡಿದರು.
ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ,ನಮ್ಮ ಮುಖ್ಯಮಂತ್ರಿಗಳು ವಿಶೇಷ ಕಾರ್ಯಕ್ರಮಗಳನ್ನು ಕರ್ನಾಟಕದ ಜನತೆಗೆ ನೀಡಿದ್ದಾರೆ. ಈಗ ಕಾನೂನುಗಳನ್ನು ಜಾರಿ ಮಾಡುವ ಮೂಲಕ ಕಾನೂನು ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಕಾರಣರಾಗಿದ್ದಾರೆ.
ವಿಧಾನಸಭೆ- ವಿಧಾನಪರಿಷತ್ ನಲ್ಲಿ ಕಾನೂನು ಮಂಡನೆ ಮಾಡಿ,ಅವುಗಳನ್ನು ಜನರ ಸೇವೆಗೆ ಲಭ್ಯಗೊಳಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ
ಕಾನೂನು ಸಂಶೋಧಕರು, ತಜ್ಞರು ಮತ್ತು ಪ್ರವರ್ತಕರು ರಚಿಸಿದ 105 ಕರಡು ಮಾದರಿ ಮಸೂದೆಗಳನ್ನು ಮುಖ್ಯಮಂತ್ರಿಗಳಿಗೆ ಅರ್ಪಿಸಿದರು.
CM Siddharamaiah ವಿಧಾನ ಪರಿಷತ್ ಸಭಾಪತಿಯವರಾದ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಕರ್ನಾಟಕದಲ್ಲಿ ಇದು ಅತ್ಯಂತ ಶ್ರೇಷ್ಠವಾದ ಕೆಲಸ. ವಿಧಾನಮಂಡಲಗಳು ಅತ್ಯಧಿಕ ಶಾಸನಾತ್ಮಕ ಕಾನೂನು ನಿರ್ವಹಿಸಿದೆ. ಸರ್ಕಾರ ಕಾನೂನನ್ನು ಪರಿಷ್ಕರಿಸಿ ತನ್ನ ಉದ್ದೇಶವನ್ನು ಅತ್ಯುತ್ತಮವಾಗಿ ನೆರವೇರಿಸಿದೆ. ಸಮಾಜವು ವೇಗವಾಗಿ ಬದಲಾಗುತ್ತಿರುವುದರಿಂದ ಕಾನೂನು ಸಹ ಅದರೊಂದಿಗೆ ಹೆಜ್ಜೆ ಹಾಕಬೇಕು. ನಮ್ಮಲ್ಲಿರುವ ಕಾನೂನು ಮತ್ತು ತಜ್ಞರು ಬೇರೆ ಯಾವುದೇ ದೇಶದಲ್ಲಿ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ,ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್, ಕರ್ನಾಟ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥರಾದ ಡಾ.ರೇವಯ್ಯ ಒಡೆಯರ್, ನಿರ್ದೇಶಕರಾದ ಪ್ರೊ.ಸಿ.ಎಸ್.ಪಾಟೀಲ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
