DVS College of Arts, Science and Commerce ಭೌಗೋಳಿಕ ಮಾನ್ಯತೆ ವಿಚಾರದಲ್ಲಿ ಭಾರತ ದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿ ನೋಂದಣಿ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡುವುದರಿಂದ ಸ್ಥಳೀಯ ಉತ್ಪನ್ನಗಳನ್ನು ನಕಲು ಹಾಗೂ ದುರುಪಯೋಗದಿಂದ ರಕ್ಷಿಸಬಹುದು ಎಂದು ಸಾಗರದ ಎಲ್‌ಬಿ ಮತ್ತು ಬಿಎಸ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಟಿ.ಎಸ್.ರಾಘವೇಂದ್ರ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತ ದೇಶ ಸಂಬಂಧಿಸಿ ಭೌಗೋಳಿಕ ಮಾನ್ಯತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೌಗೋಳಿಕ ಮಾನ್ಯತೆ ಎಂಬುದು ನಿರ್ದಿಷ್ಟ ಮೂಲದ ಉತ್ಪನ್ನಗಳಿಗೆ ಬಳಸುವ ವಿಶಿಷ್ಟ ಗುರುತು ಆಗಿದ್ದು, ಸ್ಥಳೀಯ ಉತ್ಪನ್ನಗಳ ಖ್ಯಾತಿ ರಕ್ಷಿಸಲು ಸಾಧ್ಯವಾಗುತ್ತದೆ. ಉತ್ಪಾದಕರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಗ್ರಾಹಕರು ನಿಜವಾದ ಉತ್ಪನ್ನಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಐ ನೋಂದಣಿ ವರ್ಷಗಳ ಅವಧಿಗೆ ಮಾನ್ಯ ಆಗಿರುತ್ತದೆ. ಪ್ರತಿ ವರ್ಷಗಳಿಗೊಮ್ಮೆ ನವೀಕರಿಸಬಹುದು. ಜಿಐ ನೋಂದಣಿಯಿಂದ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಸ್ಥಳೀಯ ಸಂಸ್ಕೃತಿ ಮತ್ತು ಕೌಶಲ್ಯಕ್ಕೆ ಉತ್ತೇಜನ ನೀಡಲು ಸಾಧ್ಯವಾಗುತ್ತದೆ ಎಂದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ಭೌಗೋಳಿಕ ಮಾನ್ಯತೆ ಅಂದರೆ ಯಾವುದಾದರೂ ವಸ್ತು ಒಂದು ನಿರ್ದಿಷ್ಟ ಪ್ರದೇಶ, ರಾಜ್ಯ ಅಥವಾ ಸ್ಥಳದಿಂದ ಬಂದಿದೆ ಎಂಬುದನ್ನು ಸೂಚಿಸುವ ಗುರುತು, ಅದರ ಗುಣಮಟ್ಟ, ಖ್ಯಾತಿ ಅಥವಾ ಇತರ ಲಕ್ಷಣಗಳು ಆ ಸ್ಥಳದ ಭೌಗೋಳಿಕ ಮೂಲದೊಂದಿಗೆ ಸಂಬಂಧಿಸಿದ್ದಾಗಿರುತ್ತದೆ ಎಂದು ಹೇಳಿದರು.
DVS College of Arts, Science and Commerce ಈವರೆಗೂ ಭಾರತ ದೇಶದ 621ಕ್ಕೂ ಹೆಚ್ಚಿನ ಉತ್ಪನ್ನಗಳು ಜಿಐ ನೋಂದಣಿ ಆಗಿದ್ದು, ಚೀನಾಕ್ಕೆ ಹೋಲಿಸಿದರೆ ಕಡಿಮೆ ಸಂಖ್ಯೆಯಲ್ಲಿದೆ. 2030ರ ವೇಳೆ ಹೆಚ್ಚಿನ ಸಂಖ್ಯೆಯ ನೋಂದಣಿ ಆಗಲು ಸರ್ಕಾರಗಳು ವಿಶೇಷ ಪ್ರೋತ್ಸಾಹ ನೀಡುತ್ತಿವೆ ಎಂದು ತಿಳಿಸಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎನ್.ಕುಮಾರಸ್ವಾಮಿ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಸ್.ಶಿವಲಿಂಗಂ, ಸಹಾಯಕ ಪ್ರಾಧ್ಯಾಪಕಿ ಎಚ್.ಎಲ್.ರಂಜಿತಾ ಇತರರಿದ್ದರು.
