Thursday, March 19, 2026
Thursday, March 19, 2026

ತಂಬಾಕು ನಿಷೇಧ ಕಾಯಿದೆ ಉಲ್ಲಂಘನೆ : ಜಿಲ್ಲೆಯಲ್ಲಿ 58 ಪ್ರಕರಣ ದಾಖಲು,₹ 6150 ದಂಡ ವಸೂಲಿ

Date:

ದಿನಾಂಕ 29/10/2025 ರಂದು ಶಿವಮೊಗ್ಗ ನಗರದ ಮಂಡ್ಲಿ ಹಾಗೂ ಬೈಪಾಸ್ ರಸ್ತೆಯ ಸುತ್ತಮುತ್ತ COTPA ಕಾಯ್ದೆಯನ್ನು ಉಲ್ಲಂಘಿಸುವವರ ವಿರುದ್ಧ ದಾಳಿಗಳನ್ನು ಹಮ್ಮಿಕೊಳ್ಳಲಾಯಿತು.

ಒಟ್ಟು 58 ಪ್ರಕರಣಗಳನ್ನು ದಾಖಲಿಸಿ 6150 ರೂ ದಂಡವನ್ನು ಸಂಗ್ರಹಿಸಲಾಯಿತು. 7 ತಂಬಾಕು ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು.

ತಂಡದ ನೇತೃತ್ವವನ್ನು ಡಾ. ನಾಗರಾಜ್ ನಾಯಕ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು ವಹಿಸಿದ್ದರು.

ಡಾ.ಚಂದ್ರಶೇಖರ್, ತಾಲೂಕು ಆರೋಗ್ಯ ಅಧಿಕಾರಿಗಳು, ಡಾ. ಹರ್ಷವರ್ಧನ್ ವೈದ್ಯಾಧಿಕಾರಿಗಳು ವಿ ಡಿ ಎಲ್, ಶ್ರೀ ಬಸವರಾಜ್ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಶ್ರೀ ಹೇಮಂತರಾಜ್ ಅರಸ್ K M, ಜಿಲ್ಲಾ ಸಲಹೆಗಾರರು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಶ್ರೀ ರವಿರಾಜ್, ಸಮಾಜ ಕಾರ್ಯಕರ್ತರು, ಶ್ರೀ ವಿಕಾಸ್, ಆರೋಗ್ಯ ಮೇಲ್ವಿಚಾರಕರು,ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ,ಪೊಲೀಸ್ ಇಲಾಖೆ ಹಾಗು ಮಹಾನಗರ ಪಾಲಿಕೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ COTPA ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...