Monday, February 2, 2026
Monday, February 2, 2026

Atma Yojana ಆಯನೂರು & ನಿದಿಗೆ ರೈತಸಂಪರ್ಕ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ನೇಮಕಾತಿ

Date:

Atma Yojana ಕೃಷಿ ಇಲಾಖೆ ವತಿಯಿಂದ 2025-26 ನೇ ಸಾಲಿನ ಆತ್ಮ ಯೋಜನೆಯಡಿ ನೇರ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಆಯನೂರು ಹಾಗೂ ನಿದಿಗೆ-1 ರ ರೈತ ಸಂಪರ್ಕ ಕೇಂದ್ರದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು 45 ವರ್ಷ ಮೀರಿರಬಾರದು. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಯಲ್ಲಿ 1 ವರ್ಷ ಸೇವಾನುಭವ ಹೊಂದಿರಬೇಕು. ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಪದವಿ/ಸ್ನಾತಕ್ಕೋತ್ತರ ಪದವಿಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪದವಿ/ಸ್ನಾತಕ್ಕೋತ್ತರ ಪದವಿಯ ಅಂತಿಮ ಅಂಕಪಟ್ಟಿ, ಪರಿಶಿಷ್ಟ ಜಾತಿ/ಪಂಗಡ ಅಭ್ಯರ್ಥಿಯಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ದಾಖಲಾತಿಗಳನ್ನು ಹೊಂದಿರಬೇಕು.

Atma Yojana ನಿಗದಿತ ನಮೂನೆ ಅರ್ಜಿಯನ್ನು ಯೋಜನಾ ನಿರ್ದೇಶಕರು(ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೇವಾ ಅನುಭವ ಪ್ರಮಣ ಪತ್ರ, ಕೆಲಸ ನಿರ್ವಹಿಸಿದ ಸಂಸ್ಥೆಯು ನೀಡಿದ ಪ್ರಮಾಣ ಆದೇಶ ಪತ್ರ, ಕೆಲಸ ನಿರ್ವಹಿಸಿದ ಅವಧಿಗೆ ಸಂಬಂಧಪಟ್ಟ ಸಂಸ್ಥೆಯಿಂದ ಹಾಜರಾತಿ ಪ್ರಮಾಣ ಪತ್ರ, ಸಂಸ್ಥೆಯಿಂದ ವೇತನ ದೃಢೀಕರಣ ಹಾಗೂ ವೇತನ ಜಮಾ ಆದ ಕುರಿತು ಬ್ಯಾಂಕ್ ಖಾತೆಯ ವಿವರಗಳನ್ನು ಲಗತ್ತಿಸಿ ನ.14 ರೊಳಗಾಗಿ ಸಲ್ಲಿಸುವಂತೆ ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ:08182-221906 ನ್ನು ಸಂಪರ್ಕಿಸುವುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...