ನಮ್ಮ ಅಂದರೆ ಭಾರತದ ವಿದ್ಯುತ್ ಬಳಕೆ 2000ನೇ ಇಸವಿಯಲ್ಲಿ 112Twh (112 ಟ್ರಿಲಿಯನ್ ಯೂನಿಟ್) ಇದ್ದರೆ, ಆದು 2023-24ರ ಹೊತ್ತಿಗೆ 1,622 Twh ಅಂದರೆ ಹದಿನಾಲ್ಕು ಪಟ್ಟು ಏರಿದೆ. ನಮ್ಮ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ 2000ದಲ್ಲಿ ಸುಮಾರು ಒಂದು ಲಕ್ಷ ಮೆಗಾವಾಟ್ ಆಗಿದ್ದರೆ, ಅದು ಕಳೆದ ವರ್ಷಾಂತ್ಯಕ್ಕೆ ನಾಲ್ಕೂವರೆ ಲಕ್ಷ ಮೆಗಾವಾಟಿಗೆ, ಅಂದರೆ ನಾಲ್ಕೂವರೆ ಪಟ್ಟು ಏರಿದೆ. ವಾರ್ಷಿಕ ತಲಾವಾರು ವಿದ್ಯುತ್ ಬಳಕೆ 2000ನೇ ಇಸವಿಯಲ್ಲಿ 447ಯೂನಿಟ್ ಇದ್ದರೆ ಕಳೆದ ವರ್ಷಕ್ಕೆ 1,395 ಯೂನಿಟ್ ಅಂದರೆ ಮೂರು ಪಟ್ಟು ಹೆಚ್ಚಿದೆ. ( ಜನಸಂಖ್ಯೆಯ ಅಗಾದ ಹೆಚ್ಚಳದ ನಡುವೆಯೂ)
ಇಷ್ಟೆಲ್ಲ ವಿದ್ಯುತ್ ಬಳಸುತ್ತಿರುವ ನಮಗೆ ವಿದ್ಯುತ್ ಎಂಬ ವಿಸ್ಮಯ ಶಕ್ತಿ, ಹುಟ್ಟಿ, ಬೆಳೆದು, ವಿಸ್ತರಿಸಿದ್ದು ಹೇಗೆಂಬ ಕುರಿತು ಅಪಾರ ಆಸಕ್ತಿ ಸಹಜ. ಬಹಳ ಜನಕ್ಕೆ ವಿದ್ಯುತ್ ಬಗ್ಗೆ ಸಾಕಷ್ಟು ಮಾಹಿತಿ ಇದ್ದಿರಬಹುದಾದರೂ, ಅಂಥದ್ದೊಂದು ಮಾಹಿತಿಯನ್ನು ಇನ್ನೊಮ್ಮೆ ಕೊಡುವ ಕಿರುಪ್ರಯತ್ನ ನನ್ನದು. ಜಗತ್ತಿನಲ್ಲಿ ವಿದ್ಯುಚ್ಛಕ್ತಿಯ ಉಗಮ ಹೇಗಾಯಿತು, ಅದನ್ನು ಕಂಡುಹಿಡಿದವರಾರು, ಅದು ಒಬ್ಬರೇ, ಅನೇಕರೇ, ಅದರ ವಿಸ್ತರಣೆ ಸಾಧ್ಯವಾದದ್ದು ಹೇಗೆ, ಕಳೆದ 150 ವರ್ಷಗಳಲ್ಲಿ ಅದು ಮನುಷ್ಯನ ಬದುಕನ್ನು ಹೇಗೆ ಪರಿವರ್ತಿಸಿತು ಮತ್ತು ಆವರಿಸಿತು ಎಂಬ ಮಾಹಿತಿಗಳನ್ನು ಒಳಗೊಂಡ ಈ ನನ್ನ ಕೃತಿ, “ಕರೆಂಟಿನ ಕತೆ”, ಅಂಕಿತ ಪ್ರಕಾಶನದ ಮೂಲಕ ನವೆಂಬರ್ ಎಂಟರಂದು ಬೆಳಿಗ್ಗೆ ಹತ್ತೂವರೆಗೆ ಬೆಂಗಳೂರಿನ ಬನಶಂಕರಿ, ಸುಚಿತ್ರ ಫಿಲ್ಮ ಸೊಸೈಟಿ ಸಭಾಂಗಣದಲ್ಲಿ ಬಿಡುಗಡೆ ಕಾಣುತ್ತಿದೆ.
“ಕರೆಂಟಿನ ಕತೆ” ಪುಸ್ತಕ ಲೋಕಾರ್ಪಣೆ. ಒಲವಿನ ಓದುಗರಿಗೆ ಲೇಖಕ ಡಾ.ಗಜಾನನ ಶರ್ಮರಿಂದ ಆತ್ಮೀಯ ಕರೆಯೋಲೆ
Date:
