Bihar Assembly Election ಒಂದು ಕ್ಷಣ ನೀವು ಬಿಹಾರದಲ್ಲಿ ಒಬ್ಬ ರಾಜಕಾರಣಿ ಎಂದು ಭಾವಿಸಿ ವಿಷಯ ನಿರೂಪಣೆಗೆ ಇದೊಂದು ಪರಿಕಲ್ಪನೆಯ ಹೋಲಿಕೆ ಆಗುತ್ತದೆ ಅಷ್ಟೆ.
ಸಮಕಾಲೀನ ಬಿಹಾರಿ ರಾಜಕಾರಣಿಗಳಲ್ಲಿ ಬಹುಮಂದಿಗೆ ನೈತಿಕತೆ, ಲಜ್ಜೆ ಅಥವಾ ಸಂಕೋಚ ಎಂದರೇನು ತಿಳಿಯದು. ಲೋಕ ನೀತಿ, ಮಾದರಿ ನಡೆ-ನುಡಿ, ಆದರ್ಶ, ಮಾನ ಮರ್ಯಾದೆ – ಇದಾವುದರ ಅರಿವಿಲ್ಲ. ದೇಶಸೇವೆ. ಪ್ರಜಾತಂತ್ರ – ಇವೆಲ್ಲಾ ಲೊಳಲೊಟ್ಟೆ,
ಇವರಿಗೆ ದೇಶಕ್ಕಿಂತ ಮೊದಲು ಮಗ, ಮಗಳು, ಅಳಿಯ, ಸೊಸೆ, ಬೀಗರು, ತಮ್ಮ ಭಾವಮೈದ, ಜಾತಿ – ಇವು ಮುಖ್ಯ. ಹಾಗೊಮ್ಮೆ ಟೈಂ ಸಿಕ್ಕರೆ ನಂತರ ದೇಶದ ಚಿಂತೆ.
ಇದೀಗ ಸಿದ್ಧತೆ ಹಂತದಲ್ಲಿರುವ ಬಿಹಾರ ಹಂತದಲ್ಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಡೆದಿರುವ ಪೂರ್ವಭಾವಿ ಕಾರುಬಾರಿನ ಏಣಿಯಾಟ ಇದಕ್ಕೊಂದು ಜ್ವಲಂತ ಸಾಕ್ಷಿ. ಕಳೆದ ಮೂರು – ನಾಲ್ಕು ಚುನಾವಣೆಯಲ್ಲಿ ಜನಾಭಿಪ್ರಾಯ ಸಮೀಕ್ಷೆ ನಡೆಸಲು ನಾವು, ಅಂದರೆ ಬೆಂಗಳೂರಿನ ವರದಿಗಾರರ ತಂಡದ ಅನುಭವ ಇದು. ದೇಶದ ಸುಮಾರು 18 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ ನಮಗೆ, ಬಿಹಾರದಂತೆಯೇ ಉಳಿದ ಕಡೆ ಸಹಿತ ಇದೇ ದೃಶ್ಯಗಳು ಸರ್ವೇಸಾಮಾನ.
ಮತ್ತೊಂದು ಮಾತು ಈಗಲೇ ಹೇಳುವುದು ಉತ್ತಮ. ಬಿಹಾರ ರಾಜಕಾರಣದಲ್ಲಿ ವಂಶವೃಕ್ಷ ಸಂಸ್ಕೃತಿಗೆ ನೀರುಣಿಸಿ ಬೆಳೆಸಿದವರು ಅಪರು – ತಪರ ಅವ್ಯವಹಾರ ಖ್ಯಾತಿಯ ಲಾಲೂ ಪ್ರಸಾದ ಯಾದವ ಮತ್ತು ಆತನ ಮಡದಿ ರಾಬ್ರಿ ದೇವಿ ಮೊದಲಿಗರೇನಲ್ಲ.
ಅವಿಭಜಿತ ಬಿಹಾರದ ಮೊದಲ ಮುಖ್ಯಮಂತ್ರಿ ಕೃಷ್ಣಸಿಂಗ್ ತಮ್ಮ ಮಗ ಶಂಕರಸಿಂಗ್‌ನನ್ನು ಶಾಸಕ ಮಾಡಿ ಮಂತ್ರಿ ಮಾಡಿದ್ದರು. ನಂತರ ಬಂದ ಮುಖ್ಯಮಂತ್ರಿ ದರೋಗಪ್ರಸಾದ್ ರೈ ಮತ್ತು ಕರ್ಪೂರಿ ಠಾಕೂರರು ಇದೇ ಪದ್ಧತಿಯಿಂದ ಮಕ್ಕಳಾದ ಚಂದ್ರಿಕಾ ರೇ ಮತ್ತು ರಾಮನಾಥ ಠಾಕೂರನಿಗೆ ಪಟ್ಟಕಟ್ಟಿದ್ದುಂಟು. ಮತ್ತೊಬ್ಬ ರಣಧೀರ ಜಗನ್ನಾಥ ಮಿಶ್ರ
ಪುತ್ರ ವಾತ್ಸಲ್ಯ ಮೆರೆಸಿ ನೀತೀಶ್ ನನ್ನು ಮೇಲೆತ್ತಿದರು. ಕ್ರಿಕೆಟ್ ಪಟು ಕೀರ್ತಿ ಆಜಾದ್ ಮೂರು ಬಾರಿ ಸಂಸದನಾದದ್ದು ತಂದೆ, ಮುಖ್ಯಮಂತ್ರಿ ಭಗವತ್ ಝಾ ಕೃಪೆಯಿಂದ.
ಮತ್ತೊಬ್ಬ ಖಾಯಂ ರಾಜಕಾರಣಿ, ಲೋಕ ಜನಶಕ್ತಿ ಜನಕ ದಿ.ರಾಮವಿಲಾಸ ಪಾಸ್ವಾನರು ಇಂದಿನ ಚಿರಾಗ್ ಪಾಸ್ಥಾನನ್ನು ಬಿಹಾರದ ಸೇವೆಗೆ ಅರ್ಪಿಸಿದ್ದು ಮತ್ತೊಂದು ಉದಾಹರಣೆ. ಇವೆಲ್ಲಕ್ಕಿಂತ ಮುಖ್ಯವಾದದ್ದು ಲಾಲೂ -ರಾಬ್ರಿಗಳು ಬಿಹಾರಕ್ಕೆ ನೀಡಿದ ಅಮೋಘ ಕೊಡುಗೆಯೆಂದರೆ ತೇಜಸ್ವಿ ಯಾದವ್ ರಾಷ್ಟ್ರೀಯ ಜನತಾದಳ ಈ ಬಾರಿ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದರೆ ಈ ವ್ಯಂಗ್ಯರಾಯ ಮುಖ್ಯಮಂತ್ರಿಯಾದರೆ ಅಚ್ಚರಿಯೇನಿಲ್ಲ. ಈತ ಮತ್ತು ಮತ್ತಾರೂ ಅಲ್ಲ, ಈಗಿನ ಆರ್‌ಜಿಡಿ ಅಧ್ಯಕ್ಷ ತೇಜಸ್ವಿ ಯಾದವ.
Bihar Assembly Election ಕೊನೆಯದಾಗಿ ಬಿಹಾರದಲ್ಲಿ ತಂದೆ – ಮಕ್ಕಳ ರಾಜಕೀಯ ನಂಟಿಗೆ ಅಅಪವಾದ ಎನಿಸುವಂತ ಉದಾಹರಣೆ ಎಂದರೆಲಾಲೂ ದಂಪತಿಯ ಎರಡನೇ ಮಗ ತೇಜಯಾದವ ಮತ್ತು ಎಳು ಹೆಣ್ಣುಮಕ್ಕಳ ಪೈಕಿ ಮೊದಲನೆಯಳಾದ ಮೀಸಾ ಭಾರತಿ ಸಹಿತ ವಂಶಾವಳಿಯ ಮುಂದುವರಿಕೆಗೆ ಉದಾಹರಣೆ.
ದೃಷ್ಟಿ ಪರಿಹಾರ: ನಿತೀಶ್ ಮತ್ತು ಪ್ರಧಾನಿ ಮೋದಿ
ದೇಶದ ಪುಣ್ಯವೆಂದರೆ ಸಂತತಿ ಘೋಷಣೆಯ ರಾಜಕಾರಣ ದುರ್ವ್ಯವಹಾರದಿಂದ ದೂರ ಉಳಿದ ಇಬ್ಬರು ಮಹಾನ್ ನಾಯಕರು ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ.
ನಿತೀಶರ ಮಗ ನಿಶಾನ್’ ರಾಜಕೀಯದಿಂದ ದೂರ ಉಳಿದಿದ್ದಾನೆ. ಸ್ವಶಕ್ತಿಯ ಉದ್ಯೋಗ ನಡೆಸಿ ತಂದೆಗಿಂತ ಮೂರುಪಟ್ಟು, ಹೆಚ್ಚು ಸಂಪಾದಿಸುತ್ತಿದ್ದಾನೆ. ತಾಂತ್ರಿಕ ಪದವೀಧರ. ಅಪ್ಪಿತಪ್ಪಿ ಕೂಡ ತಂದೆಯ ನಿವಾಸದತ್ತ ತಲೆಹಾಕುತ್ತಿಲ್ಲ.
ಇನ್ನ ಪ್ರಧಾನಿ ಮೋದಿಯವರ ವಿಷಯ ದೇಶಕ್ಕೆ ಗೊತ್ತು.
ವಂಶೋದ್ಧಾರದ ಪ್ರಯತ್ನಗಳು
ತಮ್ಮ ಸಮೀಪದ ಬಂಧು-ಬಳಗಕ್ಕೆ ಚುನಾವಣೆ ಸಂದರ್ಭದಲ್ಲಿ ಎಗ್ಗುತಗ್ಗಿಲ್ಲದೆ ಸೀಟುಗಳನ್ನು ಹಂಚು ಹವ್ಯಾಸ ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿಯೂ ಇಂದಿಗೂ ಮುಂದುವರಿಯುತ್ತಿದೆ. ಇದು ರಾಜಕಾರಣಿ ಮಹೋದಯರಿಗೆ ಅಂಟಿದ ಜಾಡ್ಯ. ನಾಯಕ – ಪುಡಾರಿಗಳಿಗೆ ತಮ್ಮ ಕ್ಷೇತ್ರದಲ್ಲಿಯೇ ಇರುವ ಪ್ರಾಮಾಣಿಕ, ಅಶಕ್ತ, ದುರ್ಬಲ ಕಾರ್ಯಕರ್ತರು ಕಣ್ಣಿಗೆ ಬೀಳುವುದೇ ಇಲ್ಲ. ತಮ್ಮ ಸಂಬಂಧಿಗಳ ಹಿತ ಕಾಯುವ ಏಕೈಕ ಕಾಯಕ ಇವರದು. ಇದೊಂದು ರೀತಿ ಹಗಲುದರೋಡೆ.
ಬಿಹಾರದಲ್ಲಿ ಈಗ ನಡೆದಿರುವ ಹಂಗಾಮ ಕೂಡ ಇದಿಕ್ಕಿಂತ ಹೊರತಾಗಿಲ್ಲ, ಅದರ ಕೆಲವು ಸ್ಯಾಂಪಲ್‌ಗಳು ಹೀಗಿವೆ:
ಪ್ರಧಾನಿ – ನಿತೀಶ್ ನೇತೃತ್ವದ ಎನ್‌ಡಿಎ ಬಳಗವನ್ನು ಬಿಟ್ಟರೆ ಪ್ರಬಲವಾಗಿ ಕಾಣುವ ಪಕ್ಷ ಲಾಲೂಪ್ರಸಾದ ಯಾದವ ಕೃಪಾಪೋಷಿತ ಆರ್‌ಜೆಡಿ, ವಂಶಾವಳಿ ತಳಿಯನ್ನು ಬೆಳೆಸಿದುದಕ್ಕಾಗಿ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನು ವಾಚಾಮಗೋಚರ ತೆಗಳುತ್ತಿದ್ದ ಆರ್‌ಜೆಡಿ ನೇತೃತ್ವದ ‘ಇಂಡಿ’ ಒಕ್ಕೂಟಕ್ಕೆ ಲಾಲೂ ಅವರ ಮಗ ತೇಜಸ್ವಿಯನ್ನು ಬಿಟ್ಟರೆ ಬೇರಾರೂ ಕಾಣಿಸುವುದೇ ಇಲ್ಲ. ಇದೊಂದು ರೀತಿ ರಾಜಕಾರಣಿಗಳ ‘ಕೂಡಿಕೆ ಸಂಬಂಧ’.
ಇಂದಿನ ಸ್ಪಷ್ಟ ಚಿತ್ರಣವೆಂದರೆ ಬಿಹಾರ ಚುನಾವಣೆ ಸ್ಪರ್ಧೆಯ ಕಣದಲ್ಲಿ ನಿತೀಶ-ಲಾಲೂ – ನರೇಂದ್ರ ಮೋದಿಯವರ ಪಕ್ಷವೂ ಸೇರಿದಂತೆ ವಿವಿಧ ರಾಜಕೀಯ ನಾಯಕರ ರಕ್ತ ಸಂಬಂಧಿ ಅಥವಾ ದೂರದ ಬಂಧುಗಳ ಸಂಖ್ಯೆ ಸುಮಾರು 75ಕ್ಕೆ ಮುಟ್ಟಿದೆ. ಒಟ್ಟು 243 ಸ್ಥಾನಗಳ ಪೈಕಿ ಸಿಂಹಪಾಲು ನಾಯಕರ ಮಗ, ಸೊಸೆ, ಮಗಳು, ಅಳಿಯ, ತಮ್ಮ, ತಮ್ಮನ ಮಗ,
ಬೀಗರು ಇವರಿಂದ ತುಂಬಿದೆ. ನಾಯಕಾಗ್ರಣಿಗಳು ಮಾಡಿಕೊಂಡ ಸ್ವಯಂಕೃತಾಪರಾಧ ಆಡುವಂತಿಲ್ಲ, ಬಿಡುವಂತಿಲ್ಲ. నింతల
ವಂಶ ರಾಜಕಾರಣವನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿ, ಲಾಲೂಪ್ರಸಾದಯಾದವ, ಕರುಣಾನಿಧಿ, ದೇವೇಗೌಡರು… ಹೀಗೆ ಅಂದಿನ ಜನನಾಯಕರನ್ನು ಹೀಯಾಳಿಸುತ್ತಿದ್ದ ಉಳಿದ ರಾಜಕೀಯ ನಾಯಕರು ಬಿಹಾರದ ಟಿಕೆಟ್ ಹಂಚಿಕೆ ಬಗೆಗೆ ‘ಗಪ್‌ಚುಪ್’ ಆಗಿದ್ದಾರೆ.
ಬೀಗರು ಇವರಿಂದ ತುಂಬಿದೆ. ನಾಯಕಾಗ್ರಣಿಗಳು ಮಾಡಿಕೊಂಡ ಸ್ವಯಂಕೃತಾಪರಾಧ ಆಡುವಂತಿಲ್ಲ, ಬಿಡುವಂತಿಲ್ಲ, ನಿಂತಿಲ್ಲ.
ವಂಶ ರಾಜಕಾರಣವನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿ, ಲಾಲೂಪ್ರಸಾದಿಯಾದವ, ಕರುಣಾನಿಧಿ, ದೇವೇಗೌಡರು… ಹೀಗೆ ಅಂದಿನ ಜನನಾಯಕರನ್ನು ಹೀಯಾಳಿಸುತ್ತಿದ್ದ ಉಳಿದ ರಾಜಕೀಯ ನಾಯಕರು ಬಿಹಾರದ ಟಿಕೆಟ್ ಹಂಚಿಕೆ ಬಗೆಗೆ ‘ಗಪ್‌ಚುಪ್’ ಆಗಿದ್ದಾರೆ.
ಒಂದು ಉದಾಹರಣೆ, ಆರ್‌ಜೆಡಿ ಪಕ್ಷರಘುನಾಥಪುರ ಕ್ಷೇತ್ರದ ಟಿಕೆಟ್ ಅನ್ನು ಕೌರ್ಯ. ಸುಲಿಗೆ, ದರೋಡೆ, ಕೊಲೆ – ಇವೇ ಮೊದಲಾದ ಆಪಾದನೆಗಳೊಂದಿಗೆ ಕಾರಾಗೃಹದಲ್ಲಿದ್ದ ಮಹಮ್ಮದ್ ಶಹಾಬುದ್ದೀನ್ನ ಮಗ ಓಸಾಮಾ ಶಹಬ್ ಗೆ ನೀಡಿದೆ.
ಇನ್ನೊಂದು ರಾಜಾರೋಷದ ಆಯ್ಕೆಯೆಂದರೆ ಮುನ್ನಾ ಎನ್ನುವ ಕುಖ್ಯಾತಿಯ ಮಾಜಿ ಎಮ್ಮೆಲ್ಲೆ ತನ್ನ ಪುತ್ರಿ ಶಿವಾನಿ ಶುಕ್ಲಾಗೆ ಜೈಲಿನಲ್ಲೇ ಕುಳಿತು ಟಿಕೆಟ್ ಕೊಡಿಸಿರುವುದು.
ವಂಶಪಾರಂಪರ್ಯ ರಾಜಕಾರಣವನ್ನು ಹಗಲಿರುಳು ಟೀಕಿಸುವ ಪ್ರಧಾನಿ ನರೇಂದ್ರ ಮೋದಿಯವರ ಭಾಜಪ ಸಹಿತ ಈ ಅಪವಾದದಿಂದ ಹೊರತಾಗಿಲ್ಲ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಂದೆಯೂ ಉನ್ನತ ಸ್ಥಾನದಲ್ಲಿದ್ದರು. ಹೀಗಾಗಿ ಮತ್ತೊಮ್ಮೆ ಸಾಮ್ರಾಟರಿಗೆ ಸೀಟು ಬಳುವಳಿ ಸಿಕ್ಕಿದೆ.
ಮಾಜಿ ಮುಖ್ಯಮಂತ್ರಿ ದಿ.ಜಗನ್ನಾಥ ಮಿಶ್ರ ಅವರ ಮಗ ನಿತೀಶ ಈಗ ಜಾಂಜರ್ ಕ್ಷೇತ್ರದ ಅಭ್ಯರ್ಥಿ. ಈಗಾಗಲೇ ಮಿಶ್ರ ನಿತೀಶ್ ಕುಮಾರರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದಾನೆ.
ದಿಗ್ವಿಜಯ ಸಿಂಗ್‌ರ ಮಗಳು ಶ್ರೇಯಸಿ ಸಿಂಗ್ ಸಹಿತ ಈ ಗುಂಪಿನ ಸದಸ್ಯೆ. ಜುಮೈ ಈಕೆಯ ಕ್ಷೇತ್ರ,
ಭೂಮಿಹಾರ್ ಪಂಗಡದ ಪ್ರಭಾವಿ ನಾಯಕ ಅನಿಲ್‌ಕುಮಾರರಂತೂ ಮಗ ರಿತುರಾಜ, ಇನ್ನೊಬ್ಬ ಮಗ ಅನಿಲ, ಅಕ್ಕನ ಮಗ ರೋಹಿತ್ ಕುಮಾರ್… ಹೀಗೆ ಬೇರೆ ಬೇರೆ ಪಕ್ಷಗಳಿಂದ ವಂಶದ ಕುಡಿಗಳಿಗೆ ಸೀಟು ಕೊಡಿಸಿದ್ದಾನೆ.
ಉಳಿದ ಆರೆಂಟು ಚಿಲ್ಲರೆ – ಪಲ್ಲರೆ ಪಕ್ಷಗಳ ದಬ್ಬಾಳಿಕೆ ಕಹಾನಿಯೂ ಪ್ರಧಾನ ರಾಜಕೀಯ ಪಕ್ಷಗಳ ಸ್ಥಿತಿಗಿಂತ ಭಿನ್ನವಾಗಿಲ್ಲ. ಅತಿಹೆಚ್ಚು ಜಾತಿ ಆಧಾರತಿ ರಾಜಕೀಯ ಪಕ್ಷಗಳಿಂದ ತುಂಬಿದ ಅಪಖ್ಯಾತಿ ಬಿಹಾರದ್ದು. ಕಾಸಿಗೊಂದು, ಕೊಸರಿಗೆರಡು.
ಬೆಂಗಳೂರಿನ ವರದಿಗಾರರ ತಂಡ ದೇಶದ 18 ರಾಜ್ಯಗಳ ವಿಧಾನಸಭೆ ಚುನಾವಣೆ ಜನಾಭಿಪ್ರಾಯ ಸಂಗ್ರಹಿಸಲು ಸಾಕ್ಷಾತ್ ಸಮೀಕ್ಷೆ ನಡೆಸಿದೆ. ಬಿಹಾರ ಒಂದು ರಾಜಕೀಯ ಪ್ರಯೋಗಶಾಲೆಯ ಸ್ಯಾಂಪಲ್ ಅಷ್ಟೆ ಹಿಂದೆ ಜಂಗಲ್ ರಾಜ್ ಎನ್ನುವ ಕುಖ್ಯಾತಿಗೆ ಗುರಿಯಾಗಿದ್ದು, ಈಗ ಪ್ರಜಾತಂತ್ರ ಬಿಹಾರದಲ್ಲಿ ಚೇತರಿಸಿಕೊಳ್ಳುತ್ತಿದೆ.
ಹೀಗಾಗಿ ಉಳಿದ ರಾಜ್ಯಗಳ ವಂಶೀಕರಣ ದಂಧೆ ಮತ್ತಷ್ಟು ಹೊಲಸಾಗಿದೆ. ಉದಾಹರಣೆಗೆ ಕರ್ನಾಟಕ ರಾಜಕಾರಣ, ಅದರ ವಂಶ ಆಧಾರಿತ ಬಾಹುಗಳು ಮತ್ತು ನಾಚಿಕೆಗೆಟ್ಟ ಅಭ್ಯರ್ಥಿಗಳ ಆಯ್ಕೆ – ಇವಾವವೂ ಬಿಹಾರಕ್ಕಿಂತ ಕಡಿಮೆ ಪ್ರಮಾಣದಲ್ಲ. ನಮ್ಮಲ್ಲೂ ಲಾಲೂ ಪ್ರಸಾದರನ್ನು ಮೀರಿಸಬಲ್ಲವಂಶೋದ್ಧಾರಕ ರಾಜಕಾರಣಿಗಳು ದಂಡಿಯಾಗಿದ್ದಾರೆ.
