Railway Department Shivamogga ಶಿವಮೊಗ್ಗ ಜಿಲ್ಲೆ ಶಿವಮೊಗ್ಗ – ಭದ್ರಾವತಿ ನಡುವೆ ಬರುವ ಎಲ್‌ಸಿ.ನಂ: 42,46 ಮತ್ತು 47 ಗಳನ್ನು ಮುಚ್ಚಲು ಅದಕ್ಕಾಗಿ ಎಲ್‌ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಅ.28 ರಿಂದ ನ.03 ರವರೆಗೆ ವಿವಿಧ ದಿನಗಳಂದು ವಾಹನಗಳು ಮತ್ತು ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶ ನೀಡಿರುತ್ತಾರೆ.
ಎಲ್‌ಸಿ 43- ಯಲವಟ್ಟಿ ರಸ್ತೆ ಅ. 28ರ ಬೆ.8 ರಿಂದ ಅ.29 ರ ಸಂಜೆ 6ರವರೆಗೆ ಎಲ್.ಸಿ.46 ಮುಖಾಂತರ -ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕ ಬದಲಿ ಮಾರ್ಗ.
ಎಲ್‌ಸಿ 46- ಚಿತ್ರದುರ್ಗ ರಸ್ತೆ-ಅ.30ರ ಬೆ.8 ರಿಂದ ಅ.31 ರ ಸಂಜೆ 6 ರವರೆಗೆ ಹೊಸದಾಗಿ ನಿರ್ಮಿಸಿದ ಮೇಲ್ಸೇತುವೆ ಚಿತ್ರದುರ್ಗ ಸಂಪರ್ಕ ರಸ್ತೆ ಮಾರ್ಗ.
ಎಲ್‌ಸಿ 47-ಮಲ್ಲೇಶ್ವರ ನಗರ ರಸ್ತೆ -ನ.2 ರ ಬೆ. 8 ರಿಂದ ನ. 3ರ ಸಂಜೆ 6 ರವರೆಗೆ ಮಲ್ಲೇಶ್ವರ ನಗರ ರಸ್ತೆ-ಹೊನ್ನಾಳಿ ರಸ್ತೆ- ಸಂಗೊಳ್ಳಿ ರಾಯಣ್ಣ ಸರ್ಕಲ್ -ಶಂಕರಮಠ ಸಂಪರ್ಕ ಎಲ್ ಸಿ 47 ರ ಮಾರ್ಗವಿರುತ್ತದೆ.
Railway Department Shivamogga ಹಾಗೂ ಈ ಮಲ್ಲೇಶ್ವರನಗರ ರಸ್ತೆಯು ಕಚ್ಚಾಮಣ್ಣಿನ ರಸ್ತೆಯಾಗಿದ್ದು, ದ್ವಿಚಕ್ರ ವಾಹನಗಳು ಸಂಚರಿಸುವುದಕ್ಕ ಅವಕಾಶ ಕಲ್ಪಿಸಿ, ಭಾರಿ ವಾಹನಗಳ ಸಂಚಾರವನ್ನು ನಿಷೇದಿಸಿದೆ.
ಸಾರ್ವಜನಿಕರ ಹಿತದೃಷ್ಠಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ರಲಂ 115ರನ್ವಯ ಕೋಷ್ಟಕದಲ್ಲಿ ವಿವರಿಸಿದಂತೆ ತಾತ್ಕಾಲಿಕವಾಗಿ ಆಯಾ ದಿನಾಂಕಗಳಂದು ಮಾತ್ರ ಪರ್ಯಾಣ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದ್ದು, ಸಾರ್ವಜನಿಕರು/ ವಾಹನ ಸವಾರರು ಈ ಬದಲಿ ಮಾರ್ಗಗಳಲ್ಲಿ ಅಯಾ ದಿನಾಂಕಗಳಂದು ಮಾತ್ರ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.
