Shimoga Badminton Premier League ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2ರಲ್ಲಿ ಆರ್ ಆರ್ ಸ್ಮಾಶರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರನ್ನರ್ ಅಪ್ ಆಗಿ ಶಿವಮೊಗ್ಗ ಕಾನ್‌ಕ್ವರರ್ಸ್ ತಂಡ ಸ್ಥಾನ ಪಡೆದಿದೆ.
ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2ರಲ್ಲಿ ಪ್ರಮುಖ ಎಂಟು ತಂಡಗಳು ಭಾಗವಹಿಸಿದ್ದವು. ಬೆಳಗ್ಗೆಯಿಂದ ರಾತ್ರಿ 11ರವರೆಗೂ ಕಠಿಣ ಪೈಪೋಟಿಯ ಪಂದ್ಯಗಳು ನಡೆದವು. ಪಂದ್ಯಾವಳಿ ತುಂಬಾ ಯಶಸ್ವಿಯಾಗಲು ಅನೇಕರ ಪರಿಶ್ರಮ ಇದೆ.
ಆರ್ ಆರ್ ಸ್ಮಾಶರ್ಸ್ ತಂಡದ ಮಾಲೀಕ ರಮೇಶ್ ಹಾಗೂ ಶಶಾಂಕ್ ಮಾತನಾಡಿ, ಈ ತರಹದ ಪಂದ್ಯಾವಳಿಗಳಿಂದ ಸ್ಥಳೀಯ ಮಟ್ಟದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೇದಿಕೆ ಸಿಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾಗುತ್ತದೆ ಎಂದು ತಿಳಿಸಿದರು.
Shimoga Badminton Premier League ವಾಸವಿ ಕಾಫಿ ಪಾಂಡುರಂಗ, ಎಸ್‌ಪಿಎಎಸ್ ಕ್ಯಾಟರ್ಸ್ ಮಾಲೀಕ ಚಂದ್ರು, ವಿಸ್ಮಯ ವೆಲ್ನೆಟ್ ಸೆಂಟರ್ ಮಾಲೀಕ ಸೋಮಶೇಖರ್, ಮಾಸ್ಟರ್ ಕನ್ಸಿಸ್ಟೆನ್ಸಿ ಸರ್ವಿಸ್ ಮಾಲೀಕ ಅಮಿತ್, ಬ್ಯಾಂಬೋ ಗಾರ್ಡನ್ ಮಾಲೀಕರಾದ ಪ್ರಶಾಂತ, ರಾವ್ ಅರೆನ ಮಾಲೀಕ ಅರುಣ್ ಮತ್ತು ಆಯೋಜಕ ದೀಪಕ್, ಜೆಕೆಜಿ ಬುಲ್ಸ್ ಮಾಲೀಕ ಗೋಕುಲ್, ಆರ್‌ವಿಡಿ ರಾಕೆಟ್ ರಾಕರ್ಸ್ ಮಾಲೀಕ ರಘುನಂಧನ್ ಹಾಗೂ ರಾಕೇಶ್, ಭದ್ರ ಬ್ಲಾಕ್ ಪಾಂಥರ್ಸ್ ಮಾಲೀಕ ಲೋಕೇಶ್, ಬ್ಯಾಡ್ಮಿಂಟನ್ ವಾರಿಯರ್ಸ್ನ ಮಾಲೀಕ ರಘು, ಟೀಮ್ ಸ್ಮಾಶ್ ಇಟ್ ಮಾಲೀಕ ಪ್ರಶಾಂತ್, ಗುತ್ತಿ ಸ್ಟೈಕರ್ಸ್ ಮಾಲೀಕ ಸಚಿನ್, ಶಿವಮೊಗ್ಗ ಕಾನ್ಕರಸ್ ಮಾಲೀಕ ದರ್ಶನ್ ಹಾಗೂ ಭರತ್ ರೆಡ್ಡಿ ಉಪಸ್ಥಿತರಿದ್ದರು.
