Ranji Trophy Cricket ಶಿವಮೊಗ್ಗದ ಕ್ರಿಕೆಟ್ ಪ್ರಿಯರಿಗೆ ಗೋವಾ ಮತ್ತು ಕರ್ನಾಟಕ ನಡುವಣ ರಣಜಿ ಪಂದ್ಯ ನೆನಪಲ್ಲಿಡುವಂತೆ ಮಾಡಿದೆ.
ಕರುಣ್ ನಾಯರ್ ಸ್ಥಳೀಯ ಅಭಿಮಾನಿಗಳನ್ನ ನಿರಾಸೆ ಮಾಡದೇ 174 ರನ್ ಸಿಡಿಸಿದರು.
2017 ರಲ್ಲಿ ಇದೇ ಸ್ಟೇಡಿಯಂನಲ್ಲಿ ಹೈದ್ರಾಬಾದ್ ವಿರುದ್ಧ 132 ರನ್ ಗಳಿಸಿ ರಾಜ್ಯ ತಂಡಕ್ಕೆ ಗೆಲುವಿನ ಗರಿ ಸಿಗಿಸಿದ್ದರು.
ಈ ಬಾರಿ ಕರುಣ್ 267 ಬಾಲ್ ಗಳು,14 ಬೌಂಡರಿ, 3 ಭರ್ಜರಿ ಸಿಕ್ಸರ್ ಎತ್ತಿ ಶಿವಮೊಗ್ಗದ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.
Ranji Trophy Cricket ಮೊದಲ ದಿನದಿಂದಲೂ ಮಳೆಯ ಕಣ್ಣಾಮುಚ್ಚಾಲೆ. ಹೀಗಾಗಿ ಬ್ಯಾಟಿಂಗ್ ಪಡೆದ ಕರ್ನಾಟಕ ಮೊದಲ ದಿನ 5 ವಿಕೆಟ್ ನಷ್ಟಕ್ಕೆ 222 ಮೊತ್ತದಿಂದ ಎರಡನೇ ದಿನ 371 ರನ್ ಮೊತ್ತಕ್ಕೆ ಆಲೌಟ್ ಆಯಿತು.
ಗೋವಾಪರ ಬೌಲಿಂಗ್ ನಲ್ಲಿ ಅರ್ಜುನ್ ತೆಂಡುಲ್ಕರ್ 100-1, ವಾಸುಕಿ ಕೌಶಿಕ್ 35-3 ,ದರ್ಶನ್ ಮಿಸಲ್ 74-2 ಯಶಸ್ವಿ ಎನಿಸಿದರು. ಈ ಪೈಕಿ ಕರ್ನಾಟಕದವರೇ ಆಗಿ ಈಗ ಗೋವಾ ತಂಡ ಸೇರಿರುವ ಕೌಶಿಕ್ ಬೌಲಿಂಗ್ ನಲ್ಲಿ ಗಮನ ಸೆಳೆದಿದ್ದಾರೆ .
ಗೋವಾ ಒಂದು ವಿಕೆಟ್ ನಷ್ಟಕ್ಕೆ 28 ಗಳಿಸಿ ಇಂದಿನ ಆಟ ಮುಂದುವರೆಸಿದೆ.
Ranji Trophy Cricket ರಣಜಿ ಕ್ರಿಕೆಟ್, ಕರ್ನಾಟಕ ಮೊದಲ ಇನ್ನಿಂಗ್ಸ್ , 371.ಗೋವಾ 83-4, ಕರುಣ್ ನಾಯರ್ ಆಕರ್ಷಕ ಶತಕ
Date:
