CM Siddharamaiah ಜೀವನದಲ್ಲಿ ತಾನು ಕಂಡುಂಡ ಅಸಮಾನತೆ, ಅನ್ಯಾಯ, ಶೋಷಣೆಗಳ ವಿರುದ್ಧದ ಹೋರಾಟಕ್ಕೆ ರಾಜಕೀಯ ರಂಗ ಪ್ರವೇಶಿಸಿದ ಬಂಗಾರಪ್ಪನವರು, ದುರ್ಬಲ ಸಮುದಾಯಗಳ ಏಳಿಗೆಗಾಗಿಯೇ ಬದುಕಿನುದ್ದಕ್ಕೂ ಶ್ರಮಿಸಿದ ಧೀಮಂತ ನಾಯಕರು.
ಜನಪರ ಕಾಳಜಿ, ನೇರನಿಷ್ಠುರ ನಡೆ, ಸಮಾಜವಾದಿ ಚಿಂತನೆಗಳಲ್ಲಿ ಬಂಗಾರಪ್ಪನವರಿಗಿದ್ದ ಬದ್ಧತೆಯನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆಯುತ್ತಾ, ನಮಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.
