One Nation One Ration Card ರಾಜ್ಯದಲ್ಲಿ ‘ಒನ್ ನೇಷನ್, ಒನ್ ಕಾರ್ಡ್’ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲವಾದ್ದರಿಂದ ಇದರಿಂದಾಗಿ ಬೇರೆ ಊರುಗಳಿಂದ ಬಂದಿರುವ ವಲಸಿಗರು ಪಡಿತರ ಪಡೆಯಲು ತೊಂದರೆ ಅನುಭವಿಸುವಂತಾಗಿದೆ.
ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ವ್ಯಾಪ್ತಿಯವರಿಗೆ ಮಾತ್ರ ಪಡಿತರ ನೀಡುತ್ತಿದ್ದಾರೆ. ಸಹಾಯವಾಣಿ ಇದ್ದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
One Nation One Ration Card ಆಹಾರ ಭದ್ರತಾ ಕಾಯಿದೆ ಪ್ರಕಾರ ‘ಒನ್ ನೇಷನ್ ,ಒನ್ ಕಾರ್ಡ್ ’ ಯೋಜನೆಯಡಿ ದೇಶದ ಯಾವುದೇ ಮೂಲೆಯಲ್ಲಾದರೂ ಪಡಿತರ ವಿತರಕರ ಮಳಿಗೆಯಿಂದ ಆಹಾರ ಧಾನ್ಯಗಳನ್ನು ಪಡೆಯುವ ಹಕ್ಕು ಪಡಿತರ ಚೀಟಿದಾರರಿಗೆ ಇರುತ್ತದೆ. ಅಲ್ಲದೆ ಪ್ರತಿ ಮಳಿಗೆಯಲ್ಲೂಎಲ್ಲಾಕಾರ್ಡ್ ದಾರರೂ ರೇಷನ್ ಪಡೆಯುವುದಿಲ್ಲ. ಹೀಗಾಗಿ ಉಳಿದಿರುತ್ತದೆ. ಅಂತಹ ಪ್ರಕರಣಗಳು ಕಂಡು ಬಂದರೆ ಸಹಾಯವಾಣಿಗೆ (1967) ಅಥವಾ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷರಾದ ಟಿ.ಕೃಷ್ಣಪ್ಪ ಅವರು ತಿಳಿಸಿದ್ದಾರೆ.
