Saturday, December 6, 2025
Saturday, December 6, 2025

Gangadharendra Saraswati Mahaswamy ಶಿವಮೊಗ್ಗೆಯಲ್ಲಿ ನವೆಂಬರ್ 30 ರಂದು ಭಗವದ್ಗೀತಾ ಅಭಿಯಾನದ ” 11ನೇ ಅಧ್ಯಾಯದ ಮಹಾ ಸಮರ್ಪಣೆ ” – ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು

Date:

Gangadharendra Saraswati Mahaswamy ಶ್ರೀಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಮತ್ತು ಸ್ವರ್ಣರಶ್ಮಿ ಟ್ರಸ್ಟ್ ,ಶಿವಮೊಗ್ಗ. ಇವರ ಆಶ್ರಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ- 2025 ಶಿವಮೊಗ್ಗದಲ್ಲಿ ಉದ್ಘಾಟನೆಗೊಂಡಿತು.
ಶುಭ ಮಂಗಳ ಸಮುದಾಯ ಭವನದಲ್ಲಿ ಭಕ್ತಿಪುರಸ್ಸರವಾಗಿ ಚಾಲನೆಗೊಂಡ ಈ ಕಾರ್ಯಕ್ರಮಕ್ಕೆ ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ಬಾಮಿಗಳು ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.
ವರ್ತಮಾನದಲ್ಲಿ ಮಾನವ ಜನಾಂಗ ಕೌಟುಂಬಿಕ ಜೀವನದ ಒತ್ತಡಗಳಿಗೆ ಸಿಲುಕುತ್ತಿದೆ. ಇದರ ಫಲವಾಗಿ ಮಾನಸಿಕ
ಅಸ್ವಾಸ್ಥ್ಯತೆ ಕಾಡುತ್ತಿದೆ. ರಕ್ತದೊತ್ತಡ, ಮಧುಮೇಹ ಮುಂತಾಗಿ ಜನರ ಆರೋಗ್ಯ ಕ್ಷೀಣಿಸುವಂತಾಗಿದೆ.
ಇಂತಹ ಸನ್ನಿವೇಶದಲ್ಲಿ ಭಾರತೀಯರಿಗೆ ಸನಾತನವಾದ ಭಗವದ್ಗೀತೆಯ ಬೋಧನೆಗಳು ಆಶಾದಾಯಕವಾಗಿವೆ.
ಗೀತೆಯ ಪ್ರತಿಯೊಂದು ಶ್ಲೋಕವೂ ನಮ್ಮ ಜೀವನದ ಸರ್ವತೋಮುಖ ಏಳಿಗೆಗೆ ತೋರುಬೆಳಕಾಗುತ್ತದೆ.
ಇಂತಹ ಸನ್ನಿವೇಶದಲ್ಲಿ‌ ಶ್ರೀಮಠದ ವತಿಯಿಂದ ಭಗವದ್ಗೀತಾ ಅಭಿಯಾನವನ್ನ ಆರಂಭಿಸಿ ಆರು ವರ್ಷಗಳಾಗಿವೆ.
ಈ ಬಾರಿ ಹನ್ನೊಂದನೇಯ ಆಧ್ಯಾಯದ ಸಾಮೂಹಿಕ ಪಠಣವು ಶಿವಮೊಗ್ಗ‌ದಲ್ಲಿ ಸಮಾರೋಪಗೊಳ್ಳಲಿದೆ. ಇಪ್ಪತ್ತೈದು ಸಾವಿರ ಕಂಠಗಳಿಂದ ಪಠಣ ಕಾರ್ಯಕ್ರಮ ವ್ಯವಸ್ಥೆಗೊಳಿಸಲಾಗಿದೆ.
ಸಾಂಸ್ಕೃತಿಕ ಚಟುವಟಿಕೆಗಳಿಗೆ ನೆಲೆವೀಡಾದ ಶಿವಮೊಗ್ಗದ ಗೀತಾಭಿಮಾನಿಗಳು ಅಭೂತಪೂರ್ವ ಸ್ಪಂದಿಸಿದ್ದಾರೆ. ಎಂದು ಗಂಗಾಧರೇಂದ್ರ ಸರಸ್ವತಿ ಶ್ರೀಗಳು‌ ನುಡಿದರು.
Gangadharendra Saraswati Mahaswamy ಸಮಾರಂಭದಲ್ಲಿ ವೇದಾಂತ ಶಿರೋಮಣಿ ಮತ್ತು ಹಿರಿಯ ವಿದ್ವಾಂಸರಾದ
ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರು‌
ಭಗವದ್ಗೀತೆಯ ಕುರಿತು ಉಪನ್ಯಾಸ ನೀಡಿದರು.
ಗೀತೆಯ ಬೋಧನೆಯು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ
ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ. ಬಂಧುಗಳ ವ್ಯಾಮೋಹಕ್ಕೆ ಸಿಲುಕಿ
ಶಸ್ತ್ರ ತ್ಯಜಿಸಿದ ಅರ್ಜುನನಿಗೆ ಕೃಷ್ಣ ಮನಃಪರಿವರ್ತಿಸಿ ಮನಸ್ಸಿನಲ್ಲಿನ ತಲ್ಲಣ, ದ್ವಂದ್ವಗಳಿಗೆ ಪರಿಹಾರ, ಸಮಾಧಾನ ಹೇಳಿ ಮತ್ತೆ
ಪಾರ್ಥನನ್ನ ಯುದ್ಧಕ್ಕೆ ಸನ್ನದ್ಧಗೊಳಿಸಿದ. ಇದು
ಈಗಿನ ಮನುಷ್ಯ ಜನಾಂಗಕ್ಕೇ ಒಂದು ಮಾರ್ಗದರ್ಶಿಯಂತಿದೆ.ಯಾವುದೇ ಸಂದರ್ಭಗಳಲ್ಲಿ ಶ್ರೇಯಸ್ಸಿನ ಕಡೆ ಮನಸ್ಸು ಚಿಂತಿಸಬೇಕೆಂಬುದೇ ಗೀತೆಯ ಸಾರ ಎಂದು
ಡಾ.ಪ್ರಭಂಜನಾಚಾರ್ಯರು ಹೇಳಿದರು.ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿದ್ದರು.
: ಶಿವಮೊಗ್ಗ ಬಸವಕೇಂದ್ರದ ಡಾ.ಬಸವಮರುಳ ಸಿದ್ಧ ಮಹಾಸ್ವಾಮಿಗಳು ಮಾತನಾಡಿದರು.
ಗೀತೆ ಇಂದಿನ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ನಮ್ಮನ್ನ ಪಾರುಮಾಡುವ ಮಾಂತ್ರಿಕ ಶಕ್ತಿ ಹೊಂದಿದೆ. ಅರ್ಜುನ ನೆಪಮಾತ್ರ. ಕೃಷ್ಣನ ಬೋಧನೆ ವ್ಯಾಮೋಹಿಗಳಾದ ನಮ್ಮಲ್ಲಿ ದ್ವಂದ್ವಗಳಿವೆ. ಅದನ್ನ ಮೀರಿ ಜೀವನಾಸಕ್ತಿ ಸಾಧಿಸಬೇಕು. ಹಾಗಾದಾಗ ಮಾತ್ರ ಗೀತೆಯ ತತ್ವಾನುಷ್ಠಾನ ವಾಗುತ್ತದೆ. ದೇಶದಲ್ಲಿ ನೆಮ್ಮದಿ ನೆಲಸುತ್ತದೆ.
ಧರ್ಮದ ಜಾಗದಲ್ಲಿ ರಾಜಕಾರಣ ತಾಂಡವ.ರಾಜಕಾರಣದಲ್ಲಿ ಧರ್ಮದ ಇಣುಕಾಟದ ಪ್ರಯತ್ನವಾಗುತ್ತಿದೆ. ಇದು ಒಳಿತಾಗದ ಬೆಳವಣಿಗೆ ಎಂದು‌ ಹೇಳಿದರು.


ತಾಳಗುಪ್ಪದ ಕೂಡಲಿಮಠದ ಶ್ರೀಸಿದ್ಧವೀರ ಮಹಾಸ್ವಾಮಿಗಳು
ಮಾತನಾಡಿ , ಗೀತೆಯೇ ಒಂದು ಔಷಧಾಲಯ. ಗೀತಾತತ್ವಗಳು ಒಂದೊಂದೂ ಚಿಕಿತ್ಸಾ ಔಷಧಿ ಇದ್ದಂತೆ ಎಂದು ಭಗವದ್ಗೀತೆಯ ಮಹತ್ವದ ಬಗ್ಗೆ ತಿಳಿಸಿದರು.
ಗೀತೆಯ ಸಾಮೂಹಿಕ‌ ಪಠಣದ ಜೊತೆ ಮಕ್ಕಳಿಗೆ ಪ್ರತೀವರ್ಷ ಹತ್ತು‌ಶ್ಲೋಕಗಳ‌ ಅರ್ಥವನ್ನೂ ಹೇಳಿಕೊಡುವ ಅಭ್ಯಾಸ ಈ ಅಭಿಯಾನದ ಒಂದು ಭಾಗವಾಗಿರಲಿ ಎಂದು ಸಲಹೆ ಮಾಡಿದರು.

ಸಮಾರಂಭಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅತಿಥಿಯಾಗಿ ಉಪಸ್ಥಿತರಿದ್ದರು.
” ಈಗ ಕೃತಕ ಬುದ್ಧಿಮತ್ತೆಯ ಕ್ರಾಂತಿಯಾಗುತ್ತಿದೆ. ಅದನ್ನ ಶಮನಗೊಳಿಸಲು ಗೀತಾ ಪಠಣದಂತಹ ಚಟುವಟಿಕೆಗಳ ಮೂಲಕ ಭಾವನಾತ್ಮಕ ಮೊತ್ತಹೆಚ್ಚಿಸಬೇಕಿದೆ.
ಇಂತಹ ಅಭಿಯಾನ ಅದಕ್ಕೆ ಪೂರಕ ಎಂದು ಶಾಸಕ ಅರುಣ್ ನುಡಿದರು. ಇದೇ ಸಂದರ್ಭದಲ್ಲಿ ಶಾಸಕ ಅರುಣ್ ಅವರು ಕೊಡುಗೆಯಾಗಿ ಮುದ್ರಿಸಿದ ಭಗವದ್ಗೀತೆಯ ಇಪ್ಪತ್ತೈದು ಸಹಸ್ರಪ್ರತಿಗಳಲ್ಲಿ‌ ಕೆಲವು ಪುಸ್ತಕಗಳನ್ನ ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಲಾಯಿತು. ಕಳೆದ ಭಗವದ್ಗೀತಾ
ಅಭಿಯಾನದ ಚಾಲನಾ ಸಮಿತಿಯ ಅಧ್ಯಕ್ಷರಾಗಿ‌ಸೇವೆ ಸಲ್ಲಿದುದ ಶ್ರೀಲಕ್ಷ್ಮೀನಾರಾಯಣ ಕಾಶಿ ಅವರಿಗೆ ಸ್ವರ್ಣವಲ್ಲಿ ಶ್ರೀಗಳು ಶಾಲು ಹೊದಿಸಿ, ಗೀತೋಪದೇಶ ಸ್ಮರಣಿಕೆ ನೀಡಿ ಸನ್ಮಾನಿಸಿದರು.

Gangadharendra Saraswati Mahaswamy ಮೊದಲಿಗೆ ವಿಪ್ರವೃಂದದಿಂದ ವೇದಘೋಷ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ
ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಅಶೋಕ ಭಟ್ ಸ್ವಾಗತಿಸಿದರು. ಡಾ.ಬಾಲಕೃಷ್ಣ ಹೆಗಡೆ, ಬಿಂದುಮಾಲಿನಿ ಕಾರ್ಯಕ್ರಮ ನಿರೂಪಿಸಿದರು. ಟಿ.ಜೆ.ಲಕ್ಷ್ಮೀನಾರಾಯಣ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...