Shivamogga Country Club ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನಲ್ಲಿ ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್ ವತಿಯಿಂದ ಅ.26ರಂದು ಬೆಳಗ್ಗೆ 10.30ಕ್ಕೆ 2024-25ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆ, ರಾಜ್ಯಮಟ್ಟದ ಫೈನಾನ್ಸಿಯರ್ ಸೆಮಿನಾರ್ ಹಮ್ಮಿಕೊಳ್ಳಲಾಗಿದೆ.
ತೆರಿಗೆ, ಕಾನೂನು, ಲೇವಾದೇವಿ, ಚಿಟ್ಸ್ ಬಗ್ಗೆ ಮಾಹಿತಿ ಕಾರ್ಯಾಗಾರ, ಹಿರಿಯ ಲೇವಾದೇವಿಗಾರರಿಗೆ ಸನ್ಮಾನ ಮತ್ತು ಸನ್ಮಾನ ಪತ್ರ ವಿವರಣೆ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಉದ್ಘಾಟಿಸುವರು.
Shivamogga Country Club ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ಮೂರ್ತಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಸಹಕಾರ ಸಂಘಗಳ ನಿಬಂಧಕ ನಾಗಭೂಷಣ್ ಚಂದ್ರಶೇಖರ ಕಲ್ಮನೆ, ಸಹಕಾರಿ ಸಂಘಗಳ ಉಪವಿಭಾಗ ಸಹಾಯಕ ನಿಬಂಧಕ ಶ್ರೀನಿವಾಸ್, ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್ ರಾಜ್ಯ ಕಾರ್ಯಾಧ್ಯಕ್ಷ ಬಿ.ಶಿವರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪ್ರಸನ್ನಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಫೈನಾನ್ಸಿಯರ್ ಘಟಕದ ಅಧ್ಯಕ್ಷ ಜಿ.ವಿಜಯಕುಮಾರ್, ಜಿಲ್ಲಾ ಉಪಾಧ್ಯಕ್ಷ ಟಿ.ಎಸ್.ಬದರೀನಾಥ್ ಉಪಸ್ಥಿತರಿರುವರು. ವಿವಿಧ ಜಿಲ್ಲೆಗಳಿಂದ. ಫೈನಾನ್ಸಿಯರ್ಸ್ ಈ ಸಭೆಯಲ್ಲಿ ಭಾಗವಹಿಸುವರು. ಕರ್ನಾಟಕ ಫೈನಾನ್ಸಿಯಸ್ ಅಸೋಸಿಯೇಷನ್ಹಾ ರಾಜ್ಯ ಪದಾಧಿಕಾರಿಗಳು ಪಾಲ್ಗೊಳ್ಳುವರು.
