Klive Special ಕಂಗೊಳಿಸುತಿದೆ ಪ್ರಕೃತಿಯ ವೈಭವ
ತೆಂಗಿನ ತೋಟದ ಹಸುರಸಿರಿ
ಸಿಂಗರಿಸಿದೆ ನೀಲದ ನಭವರ್ಣವು
ಕಂಗಳ ಸೆಳೆದಿದೆ ಜಲರಾಶಿ
ಉದಕದಿ ಪಚ್ಚೆಯ ಬಿಂಬವು ಮೆರೆಯಲು
ಹೊದೆಸಿದೆ ರಂಗನು ಮುಗಿಲುಗಳು
ಪದೆಪನ್ನೀಯುವ ಸೊಬಗಿನ ದೃಶ್ಯವು
ನದಿಯಲಿ ತೇಲಿವೆ ದೋಣಿಗಳು
ಭಾವಪರವಶಗೊಳಿಸುತಿಹ ಚೆಲುವಿನ
ಠಾವಿದು ನೀಡುವುದಾನಂದ
ಜೀವಕೆ ಹುರುಪನು ತುಂಬುತಲಿರುತಿಹ
ದೇವರ ಸೃಷ್ಟಿಯು ಬಲುವಂದ
ಸುರಿಸಿ ಧಾರುಣಿಗೆ ಹನಿಗಳ ಮಾಲೆಯ
ವರುಣನು ಮರೆಯೊಳು ನಿಂದಿಹನು
ಪರಿಸರದಂದವು ಕವಿತೆಯ ಬರೆಸಿತು
ಮೆರುಗಿನ ವಸುಧೆಯ ಚಿತ್ರಣವು
ಪ್ರೇಮಾ ಶ್ರೀಕೃಷ್ಣ
