S. Bangarappa ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಹಾಗೂ ಪತ್ನಿ ದಿವಗಂತ ಶಕುಂತಲಾ ಬಂಗಾರಪ್ಪ ಅವರ ಸಮಾಧಿ ಸ್ಥಳ ಬಂಗಾರ ಧಾಮಕ್ಕೆ ಈಗ ಪ್ರವಾಸಿ ತಾಣದ ಆಕರ್ಷಣೆ.
ಪ್ರವಾಸಿ ತಾಣವಾಗಿ ರಾಜ್ಯ ಸರ್ಕಾರವು ಮನ್ನಣೆ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಎಸ್. ಬಂಗಾರಪ್ಪ ಸ್ವಂತ ಖರ್ಚಿನಲ್ಲಿ ಬಂಗಾರ ಧಾಮ
ನಿರ್ಮಾಣ ಮಾಡಿದ್ದಾರೆ.
ಎಸ್. ಬಂಗಾರಪ್ಪ ಫೌಂಡೇಷನ್ ನಿರ್ವಹಿಸುತ್ತಿರುವ ಬಂಗಾರಧಾಮವು
ಕುಂವೆಂಪು ಅವರ ಸಮಾಧಿಯಂತೆ ಇಲ್ಲೂ ಪ್ರವಾಸೋದ್ಯಮ ಮೌಲ್ಯ ಹೆಚ್ಚಿಸುವ ಚಿಂತನೆ ನಡೆದಿದೆ. ಇದೇ ತಿಂಗಳ 26ರಂದು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಜನ್ಮದಿನ ಆಚರಿಸಲಾಗುತ್ತಿದೆ. ದಿ ಎಸ್.ಬಂಗಾರಪ್ಪ ಅವರ ಚಿಂತನೆ, ಅಭಿರುಚಿಗೆ ಪೂರಕವಾಗಿ ಒಂದು ಕಾಲು ಎಕರೆ ಪ್ರದೇಶದಲ್ಲಿ ಬಂಗಾಧಾಮ ನಿರ್ಮಾಣವಾಗಿದೆ.
ಗ್ರಾನೈಟ್ ಮತ್ತು ಮಾರ್ಬಲ್ ಕೆತ್ತನೆಯ ಕಲಾಕೃತಿಗಳು ಅದರ ಸೌಂದರ್ಯ ಹೆಚ್ಚಿಸಿವೆ.
ಧ್ಯಾನಮಂದಿರ, ಕುಡಿಯುವ ನೀರು, ಶೌಚಾಲಯ, ವಾಕಿಂಗ್ ಪಾಥ್, ಹೂವಿನ ತೋಟ, ಅಲಂಕಾರಿಕ ಗಿಡಗಳು ಸೇರಿದಂತೆ ಅಗತ್ಯ ಸೌಲಭ್ಯಗಳು ಲಭ್ಯವಿದೆ.
1,500 ಮಂದಿಗೆ ಆಸನ ವ್ಯವಸ್ಥೆಯೊಂದಿಗೆ ಆಧುನಿಕ ಬಯಲು ರಂಗಮಂದಿರ ನಿರ್ಮಾಣಗೊಂಡಿದೆ. ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ.
ಹೆಲಿಫ್ಯಾನ್ ಅಳವಡಿಕೆ ಮಾಡಲಾಗಿದೆ. ಸಂಪಿಗೆ ಮರ, ಕಲ್ಪವೃಕ್ಷ, ಈಚಲು ಮರಗಳನ್ನು ಒಳಗೊಂಡ ಸಸ್ಯ ಸಂಪತ್ತು ಇಲ್ಲಿ ಬೆಲಕೆಸಲಾಗಿದೆ.
S. Bangarappa 56 ಅಡಿ ಎತ್ತರದ ಕ್ಲಾಕ್ ಟವರ್, ವಿದ್ಯುತ್ ದೀಪಾಲಂಕಾರ ಹಾಗೂ ಹಿನ್ನೆಲೆಯಲ್ಲಿ ಸುಮಧುರ ಸಂಗೀತ ಬಂಗಾರ ಧಾಮದ ವೈಶಿಷ್ಟ್ಯವಾಗಿದೆ. ಶಿವಮೊಗ್ಗ ಜಿಲ್ಲೆಯ ಕಣ್ಮಣಿ ಹಾಗೂ ದುರ್ಬಲ ವರ್ಗದವರ ಪ್ರತಿನಿಧಿ , ಸಾರೆಕೊಪ್ಪ ಬಂಗಾರಪ್ಪ ಅವರ ಹೆಸರು ಚಿರಸ್ಥಾಯಿಯಾಗಿಸಲು
ಪುತ್ರ ,ಸಚಿವ ಮಧು ಬಂಗಾರಪ್ಪ ಅವರ ಶ್ರಮ ಸಾರ್ಥಕವಾಗಿದೆ.
