ರಾಜ್ಯ ಅಂತರ ಶಾಲಾ ಚೆಸ್ ಪಂದ್ಯಾವಳಿಗೆ ಆಯ್ಕೆ ಯಾಗಿರುವ ಮಕ್ಕಳಿಗೆ 5 ದಿನಗಳ ಉಚಿತ ಚೆಸ್ ತರಬೇತಿ ಕಾರ್ಯಾಗಾರವನ್ನು ರಾಜ್ಯ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಡ್ಯ ಮತ್ತು ಯಾದಗಿರಿಯಲ್ಲಿ ನಡೆಸಲಾಗುತ್ತಿದೆ. ಈ ಹಿನ್ನಲೆ ನವೆಂಬರ್ ತಿಂಗಳಲ್ಲಿ ನಡೆಸುತ್ತಿರುವ 14 ಮತ್ತು 17 ವರ್ಷ ದೊಳಗಿನ ಮಕ್ಕಳ ರಾಜ್ಯ ಅಂತರ ಶಾಲಾ ಚೆಸ್ ಆಯ್ಕೆ ಪಂದ್ಯಾವಳಿಗೆ, ಆಯ್ಕೆಯಾಗಿರುವ ಮಕ್ಕಳಿಗೆ ನಗರದ ಯಾದವ ಸ್ಕೂಲ್ ಆಫ್ ಚೆಸ್ ಅ. 27 ರಿಂದ 31 ರವರೆಗೆ 5 ದಿನಗಳ ಉಚಿತ ಚೆಸ್ ತರಬೇತಿ ಮೂಲಕ ನೀಡಲಿದ್ದಾರೆ.
ಈ ತರಬೇತಿಯನ್ನು ಅ. 27 ರಿಂದ ಪ್ರತಿದಿನ ಸಂಜೆ 7 ರಿಂದ 8 ಗಂಟೆಯ ವರೆಗೆ ನಡೆಸಲಾಗುವುದು. ಪಂದ್ಯಾ ವಳಿಗೆ ಆಯ್ಕೆಯಾಗಿರುವ ಯಾವುದೇ ರೀತಿಯ ಚೆಸ್ ತರಬೇತಿ ಪಡೆಯ ಲಾರದ ಮಕ್ಕಳು ಇದರ ಪ್ರಯೋಜನ ಪಡೆಯಬಹುದು. ಅಂತರರಾಷ್ಟ್ರೀಯ ಚೆಸ್ ತೀರ್ಪು ಗಾರ ಮತ್ತು ಶ್ರೇಯಾಂಕಿತ ಆಟಗಾರ ಪ್ರಾಣೇಶ್ ಯಾದವ್ ತರಬೇತಿ ಕಾರ್ಯಾಗಾರ ನಡೆಸಿಕೊಡುವರು. ಆಸಕ್ತ ಮಕ್ಕಳು ಹೆಸರು ನೊಂದಾಯಿಸಲು ಹಾಗೂ ಮಾಹಿತಿಗೆ ಮೊ. 9242401702, 9743819678ರಲ್ಲಿ ಸಂಪರ್ಕಿಸಿ.
ಅಂತರ ಶಾಲಾ ಚೆಸ್ ಆಯ್ಕೆ ಪಂದ್ಯಾವಳಿಗೆ ಆಯ್ಕೆಯಾದವರಿಗೆ ಉಚಿತ ತರಬೇತಿ
Date:
