ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಮತದಾರರ ಬಲದಿಂದ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ರಾಜ್ಯದ ಜನರ ಲೂಟಿ ಮಾಡಿದ ಹಣದಿಂದಲೆ ಅಧಿಕಾರಕ್ಕೆ ಬಂದಿದ್ದು ಎನ್ನುವುದನ್ನು ಸಂಸದ ಬಿ.ವೈ. ರಾಘವೇಂದ್ರ ಮರೆಯಬಾರದೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ತಿರುಗೇಟು ನೀಡಿದ್ದಾರೆ.
ರಾಜ್ಯದ ಕಾಂಗ್ರೇಸ್ ಸರ್ಕಾರ ಭ್ರಷ್ಠಾಚಾರದಲ್ಲಿ ದಾಖಲೆ ಬರೆಯುತ್ತಿದೆ. ಗ್ಯಾರಂಟಿಗಳ ಹೆಸರಿನಲ್ಲಿ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ. ಗುತ್ತಿಗೆದಾರರ ಕಾಮಗಾರಿಯ ಸುಮಾರು ೩೩ ಸಾವಿರ ಕೋಟಿ ರೂಪಾಯಿಗಳ ಬಿಲ್ ಬಿಡುಗಡೆ ಮಾಡದೆ ದುರಾಡಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಸರ್ಕಾರಗಳು ಲೂಟಿ ಮಾಡುವುದಕ್ಕೆ ಆಡಳಿತಕ್ಕೆ ಬರುವುದಿಲ್ಲ. ಬದಲಿಗೆ ರಾಜ್ಯದ ಜನರ ತೆರಿಗೆ ಹಣವನ್ನು ಜನರಿಗೆ ಮರಳಿ ನೀಡುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತವೆ ಎನ್ನುವುದನ್ನು ಕಾಂಗ್ರೇಸ್ ಸರ್ಕಾರಗಳ ಜನಪರ ಯೋಜನೆಗಳ ನೋಡಿಯಾದರೂ ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿದುಕೊಳ್ಳಲಿ ಎಂದು ವೈ.ಬಿ. ಚಂದ್ರಕಾAತ ಅವರು ಹೇಳಿದ್ದಾರೆ.
ಕಾಂಗ್ರೇಸ್ ಪಕ್ಷದ ನಾಯಕರಿಗೆ ಹೈಕಮಾಂಡ್ ಮೆಚ್ಚಿಸುವ ಯಾವ ಅಗತ್ಯವೂ ಇಲ್ಲ. ಅಂತಹ ಹೈಕಮಾಂಡ್ ನೀತಿಯೇನಾದರು ಇದ್ದಿದ್ದರೆ ಕಾಂಗ್ರೇಸ್ ಪಕ್ಷ 130 ವರ್ಷಗಳಿಂದ ಜನರ ಸೇವೆ ಮಾಡದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಾಗದೆ ಗಿರಿಕಿ ಹೊಡೆದ ಭಾರತೀಯ ಜನತಾ ಪಕ್ಷದ ದುರ್ಘತಿಯೇ ಆಗುತ್ತಿತ್ತು. ಬಿ.ಜೆ.ಪಿ. ಸರ್ಕಾರಗಳಿಂದ ವ್ಯಾಪಕವಾದ ದುರಾಡಳಿತ ಕೇಳಿ ಬಂದಿದ್ದರಿಂದಲೇ ನತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಮರ್ಜಿಯಲ್ಲಿ ಅಧಿಕಾರ ನಡೆಸಬೇಕಾದ ದುಸ್ತಿತಿಗೆ ಬಿ.ಜೆ.ಪಿ. ಬಂದು ನಿಂತಿದೆ ಎಂದು ವಕ್ತಾರರಾದ ವೈ.ಬಿ. ಚಂದ್ರಕಾಂತ್ ಅವರು ಟೀಕಿಸಿದ್ದಾರೆ.
ಸಾವಿರಾರು ಜನರು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯ ಮೇಲೆ ಕುಳಿತ್ತಿದ್ದಾಗಲೆ ಬಿ.ಜೆ.ಪಿ. ಹೈಕಮಂಡ್‌ಗೆ ೧೮೦೦ ಕೋಟಿ ರೂಪಾಯಿಗಳ ಕಪ್ಪ ಕೊಟ್ಟಿರುವ ಬಗ್ಗೆ ಒಪ್ಪಿಕೊಂಡಾಗಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಬ್ಬ ಹಿರಿಯ ನಾಯಕರಾಗಿದ್ದ ಅನಂತಕುಮಾರ್ ಅವರ ಸಹಿತ ಇಡೀ ಬಿ.ಜೆ.ಪಿ. ನಾಯಕರು ರಾಜ್ಯದ ಜನರ ಮುಂದೆ ಬೆತ್ತಲಾಗಿದ್ದಾರೆ. ಆದರೂ, ಕಾಂಗ್ರೇಸ್ ಪಕ್ಷದ ನಾಯಕರು ಬಿಹಾರ ಚುನಾವಣೆಗೆ ಹಣ ನೀಡಿದ್ದಾರೆಂದು ಸಂಸದ ಬಿ.ವೈ. ರಾಘವೇಂದ್ರ ನೀಡಿರುವ ಹೇಳಿಕೆ ನಾಚಿಕೆಗೇಡಿನಿಂದ ಕುಡಿದೆ. ಬಿ.ಜೆ.ಪಿ. ನಾಯಕರು ಇಂತಹ ಬಾಲಿಷಾ ಹೇಳಿಕೆಗಳ ನೀಡುವ ಮೂಲಕ ತಮ್ಮ ಪಕ್ಷದ ಮತ್ತು ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಳ್ಳುತ್ತಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಲೇವಡಿ ಮಾಡಿದ್ದಾರೆ.
ಸಂಸದ ರಾಘವೇಂದ್ರ ಅವರ ಆರೋಪಕ್ಕೆ ಜಿಲ್ಲಾ ಕಾಂಗ್ರೆಸ್ ತಿರುಗೇಟು
Date:
