ಶಿವಮೊಗ್ಗ ದಸರಾ ಆನೆ ಬಾಲಣ್ಣಗೆ ಕಿವಿಗೆ ಗಾಯ ಆದ ವಿಚಾರವಾಗಿ ಸಿಸಿಎಫ್ ಹನುಮಂತಪ್ಪ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.
ದಸರಾ ಆನೆ ಬಾಲಣ್ಣಗೆ ಕಿವಿಗೆ ಗಾಯ ಆದ ವಿಚಾರವನ್ನು ಕಳೆದ ಎರಡು ದಿನಗಳಿಂದ ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿದೆ
ಅದು ಪ್ರಾಣಕ್ಕೆ ಅಪಾಯ ಆಗುತ್ತಿದೆ ಎಂಬ ವರದಿಯಾಗುತ್ತಿದೆ ಅದು, ಸತ್ಯಕ್ಕೆ ದೂರವಾಗಿದೆ
ಆ ರೀತಿ ಪರಿಸ್ಥಿತಿ ಅಲ್ಲಿ ಇಲ್ಲ. ಈ ಹಿಂದೆ ದಸರಾದ ವೇಳೆ ಬಾಲಣ್ಣಗೆ ಕಾಲಿಗೆ ಸ್ವಲ್ಪ ಸ್ನಾಯು ಹಿಡಿತ ಉಂಟಾಗಿತ್ತು
ಹಾಗಾಗಿ ಅದಕ್ಕೆ ಒಂದು ಇಂಜೆಕ್ಷನ್ ಕೊಡಲಾಗಿತ್ತು ಎಂದು ತಿಳಿಸಿದರು.
ನಮ್ಮ ವೈದ್ಯರಾದ ಡಾ.ಮುರಳಿ ಅವರು ಅದನ್ನ ಚೆನ್ನಾಗಿ ಹ್ಯಾಂಡಲ್ ಮಾಡುತ್ತಿದ್ದಾರೆ
ಎರಡನೇ ಬಾರಿ ಇಂಜೆಕ್ಷನ್ ಕೊಡುವ ವೇಳೆ ಅಚನಕ್ಕಾಗಿ ಆನೆ ಮೇಲೆ ಎದ್ದು ನಿಂತಿದೆ .ಇಂಜೆಕ್ಷನ್ ಕೊಟ್ಟ ಭಾಗವನ್ನ ಮರಕ್ಕೆ ಸ್ವಲ್ಪ ಉಜ್ಜಿ ಕೊಂಡಿದೆ.ಅದರಿಂದ ಕಿವಿಗೆ ಸ್ವಲ್ಪ ಗಾಯ ಆಗಿದೆ.
ದೇಹದ ಒಳಗಡೆ ರಕ್ತ ಚಲನೆಗೆ ಸ್ವಲ್ಪ ಅಡ್ಡಿ ಉಂಟಾಗಿದೆ.
ಹಾಗಾಗಿ ಅದರ ಕಿವಿಯಲ್ಲಿ ಸ್ವಲ್ಪ ಹುಣ್ಣು ಆಗಿತ್ತು. ಈಗ ಅದು ಸರಿ ಹೋಗುತ್ತಿದೆ ಎಂದರು.
ಇನ್ನು ಎರಡು ದಿನಗಳ ವೈದ್ಯಕೀಯ ಉಪಚಾರ ಆದಮೇಲೆ ಸರಿ ಹೋಗುತ್ತದೆ.
ಆದರೆ ಕಿವಿಗೆ ಯಾವುದೇ ರೀತಿ ತೊಂದರೆ ಆಗುವ ಲಕ್ಷಣಗಳು ಇಲ್ಲ.
ಈಗಾಗಲೇ ಆ ಗಾಯ ವಾಸಿಯಾಗುತ್ತಾ ಬಂದಿದೆ.
ವರದಿಯಲ್ಲಿ ಬಂದ ಹಾಗೆ ಯಾವುದೇ ರೀತಿಯ ಜೀವಕ್ಕೆ ಅಪಾಯವಿಲ್.
100% ಬಾಲಣ್ಣ ಆನೆ ಸೇಫ್ ಆಗಿದೆ ಎಂದು ತಿಳಿಸಿದರು.
ಮುಂದೆ ಗುಣವಾದ ಮೇಲೆ ಕಿವಿ ಸ್ವಲ್ಪ ನೇತಾಡಬಹುದು ಅದನ್ನು ಕೂಡ ಲೇಸರ್ ಟ್ರೀಟ್ಮೆಂಟ್ ಇಂದ ಕೂಡಿಸಲು ಸಾಧ್ಯವಿದೆ
ರಿಲಯನ್ಸ್ ವಂತಾರದ ತಜ್ಞರುಗಳಿಂದ ನಾವು ಸಲಹೆಯನ್ನ ಪಡೆದುಕೊಳ್ಳುತ್ತೇವೆ.ಸಿದ್ದಾಪುರದಿಂದ ಅಡಕ ಬಡಕಾ ಎಂಬ ಆನೆ ಹಿಡಿದು ತಂದಾಗ ಅದಕ್ಕೆ ಕಾಲಿಗೆ ಹೊಡೆತ ಬಿದ್ದಿತ್ತು. ಕ್ರಾಲ್ ನಲ್ಲಿ ಅದಕ್ಕೆ ಚಿಕಿತ್ಸೆ ಮಾಡಲಾಗುತ್ತಿದೆ. ಈಗಾಗಲೇ ಎರಡು ತಿಂಗಳಿಂದ ಅದಕ್ಕೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಎರಡು ತಿಂಗಳಲ್ಲಿ ಚಿಕಿತ್ಸೆ ನಡೆಯಲಿದೆ
ಈಗ ಆ ಆನೆ ಕೂಡ ಚೇತರಿಸಿಕೊಂಡಿದೆ ಎಂದರು.
