Thursday, March 19, 2026
Thursday, March 19, 2026

Department of Railway ದೀಪಾವಳಿ ಪ್ರಯುಕ್ತ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ವಿಶೇಷ ರೈಲು ಸೇವೆ

Date:

Department of Railway ಹಬ್ಬದ ಪ್ರಯುಕ್ತ ಪ್ರಯಾಣಿಕರ ನಿರೀಕ್ಷಿತ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು-ಶಿವಮೊಗ್ಗ ಟೌನ್ ನಡುವೆ ಹಾಗೂ ಬೆಂಗಳೂರು ಕಂಟೋನ್ಮೆಂಟ್-ಶಿವಮೊಗ್ಗ ಟೌನ್ ನಡುವೆ ತಲಾ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳ ವಿವರಗಳು ಹೀಗಿವೆ:

  1. ರೈಲು ಸಂಖ್ಯೆ 06225/06226 ಕೆಎಸ್ಆರ್ ಬೆಂಗಳೂರು-ಶಿವಮೊಗ್ಗ ಟೌನ್-ಕೆಎಸ್ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್):

ರೈಲು ಸಂಖ್ಯೆ 06225 ಅಕ್ಟೋಬರ್ 22, 2025 ರಂದು ಬೆಳಿಗ್ಗೆ 08:05 ಗಂಟೆಗೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು, ಅದೇ ದಿನ ಮಧ್ಯಾಹ್ನ 01:00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ. ಮರಳಿ ರೈಲು ಸಂಖ್ಯೆ 06226 ಅಕ್ಟೋಬರ್ 22, 2025 ರಂದು ಸಂಜೆ 05:15 ಗಂಟೆಗೆ ಶಿವಮೊಗ್ಗ ಟೌನ್‌ನಿಂದ ಹೊರಟು, ಅದೇ ದಿನ ರಾತ್ರಿ 10:45 ಗಂಟೆಗೆ ಕೆಎಸ್ಆರ್ ಬೆಂಗಳೂರು ತಲುಪಲಿದೆ.

ಈ ರೈಲು ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ ಮತ್ತು ಶಿವಮೊಗ್ಗ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ರೈಲು ಒಂದು ಎಸಿ 2- ಟೈರ್, ಒಂದು ಎಸಿ 3- ಟೈರ್, ಹನ್ನೊಂದು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಎಸ್‌ಎಲ್‌ಆರ್/ಡಿ ಬೋಗಿಗಳನ್ನು ಒಳಗೊಂಡಿರುತ್ತದೆ.

  1. ರೈಲು ಸಂಖ್ಯೆ 06215/06216ಬೆಂಗಳೂರು ಕಂಟೋನ್ಮೆಂಟ್–ಶಿವಮೊಗ್ಗ ಟೌನ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್):

ರೈಲು ಸಂಖ್ಯೆ 06215 ಅಕ್ಟೋಬರ್ 22, 2025 ರಂದು ಬೆಳಿಗ್ಗೆ 10:45 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಟು, ಅದೇ ದಿನ ಸಂಜೆ 06:00 ಗಂಟೆಗೆ ಶಿವಮೊಗ್ಗ ಟೌನ್ ತಲುಪಲಿದೆ. ಮರಳಿ, ರೈಲು ಸಂಖ್ಯೆ 06216 ಅಕ್ಟೋಬರ್ 22, 2025 ರಂದು ರಾತ್ರಿ 11:55 ಗಂಟೆಗೆ ಶಿವಮೊಗ್ಗ ಟೌನ್‌ನಿಂದ ಹೊರಟು, ಮರುದಿನ ಬೆಳಿಗ್ಗೆ 07:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

Department of Railway ಈ ರೈಲು ಎಸ್ಎಂಟಿವಿ ಬೆಂಗಳೂರು, ಚಿಕ್ಕಬಾಣಾವರ, ತುಮಕೂರು, ಬಾಣಸಂದ್ರ, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ಮತ್ತು ಶಿವಮೊಗ್ಗ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ರೈಲಿನಲ್ಲಿ ಒಂದು ಎಸಿ 2- ಟೈರ್, ಎರಡು ಎಸಿ 3- ಟೈರ್, ಹನ್ನೊಂದು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...