Agricultural Marketing Committee ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್‌ಕಾಮ್ಸ್) ನಿರ್ದೇಶಕರಾಗಿ ವೆಂಟಕಪುರದ ಎಂ.ಪಿ.ದಿನೇಶ್ ಪಟೇಲ್ ಹಾಗೂ ಜಿ.ನಾಗೇಶ್ ನಾಯ್ಕ್ ಸೇರಿದಂತೆ ಜಿಲ್ಲೆಯಲ್ಲಿ 15 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 15 ನಿರ್ದೇಶಕರ ಸ್ಥಾನಗಳಿದ್ದು, ಅದರಲ್ಲಿ ಶಿವಮೊಗ್ಗ ತಾಲೂಕಿನಿಂದ 6 ಜನರು ಆಯ್ಕೆಯಾಗಿದ್ದು, ಪರಿಶಿಷ್ಟ ವರ್ಗದಿಂದ ಜಿ.ನಾಗೇಶ್‌ನಾಯ್ಕ, ಸಾಮಾನ್ಯ ವರ್ಗದಿಂದ ಎಂ.ಪಿ.ದಿನೇಶ್‌ಪಟೇಲ್, ಎಸ್ಟಿ ಕ್ಷೇತ್ರದಿಂದ ಪರಶುರಾಮ್, ಸಾಮಾನ್ಯ ಕ್ಷೇತ್ರದಿಂದ ವಿಜಯಕುಮಾರ್ (ದನಿ) ಬಿಸಿಎಂ ಎನಿಂದ ಡಾ.ಶರತ್ ಮರಿಯಪ್ಪ, ಬಿಸಿಎಂ ಬಿನಿಂದ ಚಂದ್ರೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 15 ಜನರು ಮುಂದಿನ 5 ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 15 ಕ್ಷೇತ್ರಕ್ಕೆ 20 ಜನರು ನಾಮಪತ್ರ ಸಲ್ಲಿಸಿದ್ದು, ಐವರು ನಾಮಪತ್ರ ವಾಪಕ್ ತೆಗೆದುಕೊಂಡಿದ್ದರಿಂದ ಉಳಿದವರು ಅವಿರೋಧವಾಗಿ ಆಯ್ಕೆಗೊಂಡಂತಾಗಿದೆ.
Agricultural Marketing Committee ಈ ಸಂದರ್ಭದಲ್ಲಿ ಮಾತನಾಡಿದ ಮೊದಲ ಬಾರಿ ಆಯ್ಕೆಯಾದ ಎಂ.ಪಿ.ದಿನೇಶ್‌ಪಟೇಲ್ ಎಲ್ಲರ ಪ್ರೀತಿ ವಿಶ್ವಾಸದಿಂದ ಮೊದಲ ಬಾರಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ. ಪ್ರಮಾಣಿಕವಾಗಿ ಸೇವೆ ಸಲ್ಲಿಸುವೆ, ಆಯ್ಕೆಗೆ ಸಹಕರಿಸಿದ ಎಂಎಡಿಬಿ ಅಧ್ಯಕ್ಷ ಆರ್.ಮಂಜುನಾಥ್‌ಗೌಡ, ಪಿಒ ಶಿವಕುಮಾರ್, ಪಿ.ಎಸ್.ಗಿರೀಶ್‌ರಾವ್ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.
Agricultural Marketing Committee ಶಿವಮೊಗ್ಗ ಹಾಪ್ ಕಾಮ್ಸ್ ನಿರ್ದೇಶಕರಾಗಿ ದಿನೇಶ್ ಪಟೇಲ್ ಆಯ್ಕೆ
Date:
