Bharat Scouts and Guides ಸ್ಕೌಟ್ ಗೈಡ್ ಚಳುವಳಿಗೆ ಸೇರುವುದರಿಂದ ಕೌಶಲ್ಯ ವೃದ್ಧಿಸುತ್ತದೆ ಎಂದು ಶಕುಂತಲಾ ಚಂದ್ರಶೇಖರ್ ಹೇಳಿದ್ದಾರೆ.
ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಜಂಬೂರೀ ಆನ್ ದಿ ಏರ್ ( ಜೋಟ ), ಜಂಬೂರೀ ಆನ್ ದಿ ಇಂಟರ್ನೆಟ್ ( ಜೋಟಿ ) ಕಾರ್ಯಕ್ರಮದಲ್ಲಿ ಭಾಗವಹಿಸಿ ಪದಾಧಿಕಾರಿಗಳು ಮತ್ತು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂದುವರೆದು ತಂತ್ರಜ್ಞಾನ ಅಗಾಧವಾಗಿ ಬೆಳೆದಿರುವ ಇವತ್ತಿನ ಕಾಲಮಾನದಲ್ಲಿ ಎಲ್ಲರೊಂದಿಗೆ ಸ್ಕೌಟ್ ಗೈಡ್ ಮಕ್ಕಳು ಸಹ ಬೆಳೆಯಬೇಕೆಂದು ಹೇಳಿದರು. ಮತ್ತು ಅದಕ್ಕೆ ಈ ಜೋಟ ಜೋಟಿ ಕಾರ್ಯಕ್ರಮ ಸಹಾಯವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಆಯುಕ್ತ ರೋವರ್ ಶ್ರೀ ಕೆ. ರವಿ ಮಾತನಾಡುತ್ತಾ ಸ್ಕೌಟ್ ಗೈಡ್ ಚಳುವಳಿಯ ವಿಶಿಷ್ಟ ಕಾರ್ಯಕ್ರಮ ಜೋಟ ಜೋಟಿ ಯಾಗಿದ್ದು, ಇದರ ಮೂಲಕ ವೈಜ್ಞಾನಿಕವಾಗಿಯೂ ಬೆಳೆಯಬಹುದಾಗಿದೆ ಎಂದು ಹೇಳಿದರು. ಈ ಚಳುವಳಿಗೆ ಸೇರಿಕೊಂಡರೆ ದೇಶಪ್ರೇಮ, ಸಾಮಾಜಿಕ ಬದ್ಧತೆ ಬೆಳೆಯುವುದಲ್ಲದೆ ಮುಂದಿನ ಜೀವನಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು. ಕೇಂದ್ರ ಸ್ಥಾನಿಕ ಆಯುಕ್ತರಾದ ಶ್ರೀ ಜಿ. ವಿಜಯ್ ಕುಮಾರ್ ಮಾತನಾಡುತ್ತ ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿರುವ ಸರ್ವರಿಗೂ ಅಭಿನಂದಿಸಿದರು. Bharat Scouts and Guides ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ಶ್ರೀ ಘನಶ್ಯಾಮ್ ಗಿರಿಮಾಜಿ ಸರ್ವರನ್ನು ಸ್ವಾಗತಿಸಿದರು. ಶ್ರೀ ರಾಜೇಶ್ ವಿ. ಅವಲಕ್ಕಿ, ಶಿವಮೊಗ್ಗ ಸ್ಥಳೀಯ ಸಂಸ್ಥೆ ಮತ್ತು ಶಿವಮೊಗ್ಗ ಆಮೇಚೂರ್ ರೇಡಿಯೋ ಕ್ಲಬ್ ಕಾರ್ಯದರ್ಶಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ಹ್ಯಾಮ್ ರೇಡಿಯೋ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂಧರ್ಭದಲ್ಲಿ ಶಿಕಾರಿಪುರ ತಾಲೂಕಿನ ಸರ್ಕಾರಿ ಪದವೀಪೂರ್ವ ಕಾಲೇಜಿನಿಂದ ಆಗಮಿಸಿದ್ದ ರೋವರ್ ಸ್ಕೌಟ್ ಲೀಡರ್ ಶ್ರೀ ಸದಾಶಿವಯ್ಯ ಮತ್ತು ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ಸ್ಕೌಟ್ ಮಾಸ್ಟರ್ ಶ್ರೀ ಅಣ್ಣಪ್ಪ ಒಂಟಮಾಳಿಗಿ ಹಾಗೂ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜು, ಮಲ್ನಾಡ್ ಓಪನ್ ಗ್ರೂಪಿನ ಸದಸ್ಯರು, ಸರ್ಕಾರಿ ಹಿರಿಯ ಪ್ರಥಮಿಕ ಶಾಲೆ, ಆಳದಹಳ್ಳಿ ಮತ್ತು ವಿವಿಧ ಶಾಲೆ, ಕಾಲೇಜಿನ, ಮುಕ್ತದಳದ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು. ಶ್ರೀ ಅಣ್ಣಪ್ಪ ಒಂಟಮಾಳಿಗಿ ಸರ್ವರಿಗೂ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಚಂದ್ರಶೇಖರಯ್ಯ, ಸಹ ಕಾರ್ಯದರ್ಶಿ ಶ್ರೀ ವೈ. ಆರ್. ವೀರೇಶಪ್ಪ ಉಪಸ್ಥಿತರಿದ್ದರು.
ಸ್ಕೈಪ್ ತಂತ್ರಶ ಮುಖಾಂತರ ಮಕ್ಕಳು ಇಂಡೋನ್ಎಷಿಯ, ಜಪಾನ್, ಮುಂತಾದ ದೇಶ ವಿದೇಶದ ಸ್ಕೌಟ್ ಗೈಡ್ ಮಕ್ಕಳೊಂದಿಗೆ ಸಂವಹನ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಟ್ಟರು.
Bharat Scouts and Guides ತಂತ್ರಜ್ಞಾನ ಅಗಾಧ ಬೆಳೆದಿದೆ. ಇದರೊಟ್ಟಿಗೆ ಸ್ಕೌಟ್ ಗೈಡ್ ಮಕ್ಕಳೂ ಸಹ ಬೆಳೆಯಬೇಕು- ಶಕುಂತಲಾ ಚಂದ್ರಶೇಖರ್
Date:
