Shimoga District Kannada and Culture Department ಶಿವಮೊಗ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2025-26 ನೇ ಸಾಲಿನ ನವೆಂಬರ್‌ನಲ್ಲಿ “ಕಲಾಪ್ರತಿಭೋತ್ಸವ” ಆಯೋಜಿಸಿದ್ದು, ವಿವಿಧ ಕಲಾಪ್ರಕಾರದ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಲಾಪ್ರಕಾರದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಬಾಲಪ್ರತಿಭೆಗೆ 8 ರಿಂದ 13 ವರ್ಷ, ಕಿಶೋರ ಪ್ರತಿಭೆಗೆ 14 ರಿಂದ 18 ವರ್ಷ, ಯುವ ಪ್ರತಿಭೆಗೆ 19 ರಿಂದ 30 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದ್ದು, ವಯಸ್ಸಿನ ದಾಖಲೆಗಾಗಿ ಶಾಲೆ/ ಕಾಲೇಜಿನಿಂದ ದೃಢೀಕರಿಸಿದ ಪತ್ರ ಹಾಗೂ ವಿದ್ಯಾರ್ಥಿಗಳಲ್ಲದಿದ್ದಲ್ಲಿ ನಗರಸಭೆ/ ಪಂಚಾಯಿತಿಯಿAದ ದೃಢೀಕರಣ ಪತ್ರ ಪಡದು ಸಲ್ಲಿಸಬೇಕು.
Shimoga District Kannada and Culture Department ಒಬ್ಬರು ಒಂದೇ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದ್ದು, ಕೈ ಬರಹದ ಅರ್ಜಿಯ ಮೂಲಕ ತಾವು ಭಾಗವಹಿಸುವ ಸ್ಪರ್ಧೆಯ ವಿವರದೊಂದಿಗೆ ವಯಸ್ಸಿನ ದಾಖಲಾತಿಯನ್ನು ಸೇರಿಸಿ ಅ.31 ರೊಳಗೆ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮAದಿರ ಇವರಿಗೆ ಸಲ್ಲಿಸಬೇಕೆಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
