Saturday, December 6, 2025
Saturday, December 6, 2025

Adi Karmayogi Campaign ಕೇಂದ್ರ ಸರ್ಕಾರದ ಬುಡಕಟ್ಟು ಅಭಿವೃದ್ಧಿ ಮಂತ್ರಾಲಯದ ವತಿಯಿಂದ ಆದಿ ಕರ್ಮಯೋಗಿ ಅಭಿಯಾನ

Date:

Adi Karmayogi Campaign ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಉಪಸ್ಥಿತಿಯಲ್ಲಿ ಅಕ್ಟೋಬರ್ 17, 2025 ರಂದು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಬುಡಕಟ್ಟು ಅಭಿವೃದ್ಧಿ ಮಂತ್ರಾಲಯದ ವತಿಯಿಂದ ಆದಿ ಕರ್ಮಯೋಗಿ ಅಭಿಯಾನ (AKA) ಮತ್ತು ಧರತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ (DA JGUA) ಯೋಜನೆಯ ಅನುಷ್ಠಾನದ ಸಾಧನೆಗಳನ್ನು ಗುರುತಿಸಲು “ಆದಿ ಕರ್ಮಯೋಗಿ ಅಭಿಯಾನದ ರಾಷ್ಟ್ರೀಯ ಸಮಾವೇಶ-2025” ಅನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯವು ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂಬ ಹೆಮ್ಮೆಯ ಸಂಗತಿಯನ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1)ವಿಕಸಿತ ಭಾರತಕ್ಕಾಗಿ ಬುಡಕಟ್ಟುಗಳ ಸಬಲೀಕರಣ ವಿಭಾಗದಲ್ಲಿ 5 ರಾಷ್ಟ್ರೀಯ ಅತ್ಯುತ್ತಮ ಪ್ರದರ್ಶನ ನೀಡಿದ ಜಿಲ್ಲೆಗಳು:

ಚಿಕ್ಕಬಳ್ಳಾಪುರ – DA JGUA ಧರತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ

ಚಿಕ್ಕಬಳ್ಳಾಪುರ – ಆದಿ ಕರ್ಮಯೋಗಿ ಅಭಿಯಾನ (AKA)

ಬೀದರ್ – ಆದಿ ಕರ್ಮಯೋಗಿ ಅಭಿಯಾನ (AKA)

ರಾಯಚೂರು – ಆದಿ ಕರ್ಮಯೋಗಿ ಅಭಿಯಾನ (AKA)

ಬಳ್ಳಾರಿ – ಆದಿ ಕರ್ಮಯೋಗಿ ಅಭಿಯಾನ (AKA)

Adi Karmayogi Campaign 2)ಧರತಿ ಅಭಾ ಜನಭಾಗೀದಾರ ಅಭಿಯಾನದಡಿಯಲ್ಲಿ ರಾಜ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಜಿಲ್ಲೆ ಚಿಕ್ಕಬಳ್ಳಾಪುರ
3)ಉತ್ತಮ ಪ್ರದರ್ಶನ ತೋರಿದ ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರರು ಶ್ರೀ ಎ. ರಾಜಶೇಖರ್, ಸಂಶೋಧನಾ ಅಧಿಕಾರಿ, ಬುಡಕಟ್ಟು ಅಭಿವೃದ್ಧಿ ಇಲಾಖೆ
ಬುಡಕಟ್ಟು ಜನಾಂಗದವರ ಏಳಿಗೆಗೆ ನಮ್ಮ ಸರ್ಕಾರದ ಸದಾ ಬದ್ಧವಾಗಿದ್ದು, ಪ್ರಶಸ್ತಿ ವಿಜೇತ ತಂಡಗಳಿಗೆ ಅಭಿನಂದನೆಗಳು ಎಂದು ಸಿದ್ಧರಾಮಯ್ಯನವರು ವಿಜೇತರನ್ನ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...