N. Santosh Hegde ಎಲ್ಲರಿಗೂ ಸಂಘಟನೆ ಕಟ್ಟುವ ಹಕ್ಕು ಸಂವಿಧಾನವೇ ನೀಡಿದ್ದು, ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಸಂಘಟನೆಗಳ ನಿಷೇಧ ಮಾಡುವ ಕ್ರಮ ಸಂವಿಧಾನ ವಿರೋಧಿ ನಡೆಯಾಗುತ್ತದೆ ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ ಶ್ರೀ ಸಂತೋಷ ಹೆಗಡೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಧಾರವಾಡದಲ್ಲಿ ಶ್ರೀ ಸಂತೋಷ್ ಹೆಗಡೆ ಮಾತನಾಡುತ್ತಿದ್ದರು.
ಸಂಘಟನೆ ಮಾಡುವ ಹಕ್ಕು ಸಂವಿಧಾನ ಕೊಟ್ಟಿದೆ. ಹೀಗಿರುವಾಗ ಆರ್.ಎಸ್.ಎಸ್. ಅನ್ನು ನಿಷೇಧ ಮಾಡುವ ಕ್ರಮ ಸಂವಿಧಾನ ವಿರೋಧಿ ಯಾಗುತ್ತದೆ ಎಂದರು.
N. Santosh Hegde ಸರ್ಕಾರವು ಆರ್ ಎಸ್ ಎಸ್ ಸಂಘಟನೆ ನಿಷೇಧ ಮಾಡಿದ್ದೇ ಆದರೆ ಆ ನಿರ್ಧಾರವೇ ಕಾಂಗ್ರೆಸ್ ಗೆ ತಿರುಗು ಬಾಣವಾಗಲಿದೆ ಎಂದು ಹೆಗಡೆ ಅವರು ನುಡಿದರು.
