Namma TV Shivamogga ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದರಿಂದ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಪೋದಾರ್ ಶಾಲೆ ಗಣಿತ ಶಿಕ್ಷಕ ಡಾ. ಕೆ.ವಿ.ಗಿರೀಶ್ ಹೇಳಿದರು.
ನಮ್ಮ ಟಿವಿ ಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಪೂರಕವಾದ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಗೆ ಆರು ವಿಶ್ವ ದಾಖಲೆ ಮತ್ತು ಎರಡು ಗೌರವ ಡಾಕ್ಟರೇಟ್ ಜತೆಯಲ್ಲಿ 21 ಪ್ರಶಸ್ತಿಗಳನ್ನ ತಂದು ಕೊಟ್ಟಿದ್ದೇನೆ. 1600ಕ್ಕೂ ಹೆಚ್ಚು ಆನ್‌ಲೈನ್ ರಸಪ್ರಶ್ನೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದೇನೆ ಎಂದರು.
ಸಾಧನ ಅಕಾಡೆಮಿ ಶಿಕಾರಿಪುರ, ಸ್ಪರ್ಧಾ ಕರ್ನಾಟಕ ಅಕಾಡೆಮಿ ಶಿವಮೊಗ್ಗ, ಸಾಧನ ಸ್ಕೂಲ್ ಶಿಕಾರಿಪುರ ಯೂಟ್ಯೂಬ್ ಚಾನಲ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ವರ್ಲ್ಡ್ ಕಲ್ಚರ್ ಎನ್ವಿರಾನಮೆಂಟಲ್ ಪ್ರೊಟೆಕ್ಷನ್ ಕಮಿಷನ್ ನವದೆಹಲಿ ವತಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದೇನೆ. ವರ್ಲ್ಡ್ ಎಜುಕೇಶನಲ್ ಅಚೀವ್‌ವ್ಮೆಂಟ್ ಅವಾರ್ಡ್ ಕೌನ್ಸಿಲ್ ನವೋದಯ ಕೂಡ ಎರಡನೇ ಗೌರವ ಡಾಕ್ಟರೇಟ್ ಕೊಟ್ಟು ಸನ್ಮಾನಿಸಿದೆ ಎಂದರು.
Namma TV Shivamogga ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಕೆ.ವಿ.ಗಿರೀಶ್ ಅವರನ್ನು ನಮ್ಮ ಟಿವಿ ಬಳಗದ ವತಿಯಿಂದ ಸನ್ಮಾನಿಸಲಾಯಿತು. ನಮ್ಮ ಟಿವಿ ಮಾಲಿಕ ಜಗದೀಶ್, ನಿರೂಪಕ ಜಿ.ವಿಜಯಕುಮಾರ್, ಲೋಕೇಶ್ವರಪ ಉಪಸ್ಥಿತರಿದ್ದರು.
Namma TV Shivamogga ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಶೈಕ್ಷಣಿಕ ಪ್ರಗತಿ : ಡಾ. ಕೆ.ವಿ.ಗಿರೀಶ್
Date:
