ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಭಿವೃದ್ಧಿ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಉಪಾಧ್ಯಕ್ಷರು ಜಿಲ್ಲಾ ಪದಾಧಿಕಾರಿಗಳು ಹಾಗೂ ಭದ್ರಾವತಿ ತಾಲ್ಲೂಕಿನ ಸಂಘದ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ದಸರಾ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಕ್ಕೆ ಹಾಗು KRIDL ಅಧ್ಯಕ್ಷರಾಗಿ ನೇಮಕವಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ಹಾಗೂ ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಅತ್ಯಂತ ಶೀಘ್ರವಾಗಿ ಲಭಿಸಲಿ ಎಂದು ಹಾರೈಸಲಾಯಿತು. ದಿನಾಂಕ 25.10.2025 ರಂದು ನಡೆಯುವ ಸರ್ವ ಸದಸ್ಯರ ಮಹಾಸಭೆ ಹಾಗು ಇತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸಂಘವನ್ನು ಹೆಚ್ಚು ಸಂಘಟಿಸುವ ವಿಚಾರವಾಗಿ ಅನೇಕ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಿ ವಿಜಯ್ ಕುಮಾರ್, ಕಾರ್ಯದರ್ಶಿಯವರಾದ ಶ್ರೀ ಎಮ್ ಆರ್ ಕಿರಣ್ ಕುಮಾರ್, ಖಜಾಂಚಿಯವರಾದ ಶ್ರೀ ರವಿ ಅಜ್ಮನಿ, ಸಂಚಾಲಕರಾದ ಶ್ರೀ ಗುರುರಾಜ್ ಮಟ್ಟಿ, ನಿರ್ದೇಶಕರುಗಳಾದ ಶ್ರೀ ಚನ್ನವೀರೇಶ್ ಕಲ್ಲಿಹಾಳ, ಶ್ರೀ ಮಂಜಪ್ಪ ಸಜ್ಜನಶೆಟ್ಟರ್, ಶ್ರೀ ಕೆ ಪಿ ರವೀಶ್, ಶ್ರೀ ಬಸವರಾಜ್ ಎಮ್, ಶ್ರೀ ಲಿಂಗರಾಜು ಜಿ ಸಿ, ಭದ್ರಾವತಿ ತಾಲೂಕು ಅಧ್ಯಕ್ಷರಾದ ಶ್ರೀ ಆನಂದ್ ಕುಮಾರ್, ಶ್ರೀ ವಾಗೀಶ ಕೋಠಿ, ಶ್ರೀ ಮಹದೇವ್ ನಂದಿನಿ ಹೋಟೆಲ್ ಹಾಗು ಅನೇಕ ಹಿರಿಯರು ಹಾಜರಿದ್ದರು.
ಶಿವಮೊಗ್ಗ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ ಕೆ ಸಂಗಮೇಶ್ವರ ರವರಿಗೆ ಸನ್ಮಾನ
Date:
