Shimoga McGann Hospital ಶಿವಮೊಗ್ಗದ ಜಿಲ್ಲಾ ಹಾಗೂ ತರಬೇತಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಪರಿಶೀಲನ ಮಂಡಳಿಯ ಕಚೇರಿಯನ್ನು ಅಧಿಕೃತವಾಗಿ ಅದರ ಗೌರವಾನ್ವಿತ ಅಧ್ಯಕ್ಷರು ಹಾಗೂ ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಅಭಯ್ ಡಿ. ಚೌಗಲಾ ರವರು ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಎಂ. ಎಸ್., ಶಿವಮೊಗ್ಗದ ಹೆಚ್ಚುವರಿ ಜಿಲ್ಲಾಧಿಕಾರಿಗಳಾಗಿರುವಂತಹ ಶ್ರೀ ಅಭಿಷೇಕ್, ಸಿಮ್ಸ್ ನಿರ್ದೇಶಕರಾದ ಡಾ. ವಿರೂಪಾಕ್ಷಪ್ಪ, ಸಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾಕ್ಟರ್ ಟಿ. ಡಿ. ತಿಮ್ಮಪ್ಪ, ಜಿಲ್ಲಾ ಶಾಸ್ತ್ರ ಚಿಕಿತ್ಸೆಕರಾದ ಡಾಕ್ಟರ್ ಸಿದ್ದನಗೌಡ ಪಿ, ಜಿಲ್ಲಾ ಮಾನಸಿಕ ಆರೋಗ್ಯ ಪರಿಶೀಲನ ಮಂಡಳಿಯ ಸದಸ್ಯರಾಗಿರುವ ಡಾಕ್ಟರ್ ರಾಮ್ ಪ್ರಸಾದ್ ಕೆ. ಎಸ್., ಡಾಕ್ಟರ್ ಉಮಾ ಎಚ್. ಎಂ., ಡಾಕ್ಟರ್ ರಜನಿ ಎ. ಪೈ, ಹಾಗೂ ಡಾಕ್ಟರ್ ಶುಭ್ರತಾ ರವರು ಹಾಜರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಜಿಲ್ಲಾ ಮಾನಸಿಕ ಆರೋಗ್ಯ ಪರಿಶೀಲನ ಮಂಡಳಿಯ ಗೌರವಾನ್ವಿತ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯನ್ನು ನಡೆಸಿದರು.
Shimoga McGann Hospital ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಕಾರ್ಯಾಲಯಕ್ಕೆ ಚಾಲನೆ
Date:
