Sankara Eye Hospital ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಮತ್ತು ಗಿISಐ ಆಸ್ಪತ್ರೆಯರ ಸಹಯೋಗದೊಂದಿಗೆ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ದಿನಾಂಕ ೧೫ನೇ ಅಕ್ಟೋಬರ್, ೨೦೨೫ ರಂದು ಆಯೋಜಿಸಲಾಗಿತ್ತು ೧೪೩ ಕ್ಕೂ ಹೆಚ್ಚು ಸಂಖ್ಯೆಯ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಈ ಶಿಬಿರದ ಸೌಲಭ್ಯವನ್ನು ಪಡೆದರು. ಈ ಶಿಬಿರದಲ್ಲಿ ರಕ್ತದೊತ್ತಡ (ಬಿಪಿ) ತಪಾಸಣೆ, ಉಖಃS (ಮಧುಮೇಹ) ತಪಾಸಣೆ, ಟಿಟ್ಮಸ್ ಕಣ್ಣಿನ ತಪಾಸಣೆ (ಸಮೀಪ ದೃಷ್ಠಿ, ದೂರ ದೃಷ್ಠಿ, ಬಣ್ಣ ದೃಷ್ಠಿ, ಬೈನಾಕುಲರ್ ಮೌಲ್ಯಮಾಪನ ಮತ್ತು ಟ್ರಯಲ್ ಸೆಟ್/ ವಕ್ರೀಭವನ ತಪಾಸಣೆ ಸೇರಿದಂತೆ) ಅನೇಕ ತಪಾಸಣೆಗಳನ್ನು ಮಾಡಲಾಯಿತು. ಡಾ|| ಮೇಘನ, ನೇತ್ರ ತಜ್ಞರು, ಶಂಕರ ಕಣ್ಣಿನ ಆಸ್ಪತ್ರೆ ತಜ್ಞ ವೈಧ್ಯೆ ಸಲಹೆ ನೀಡಿದರು.
Sankara Eye Hospital ಈ ಶಿಬಿರದಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಸಹಾಯಕರಾದ ಶ್ರೀ ಹರ್ಷ, ಶ್ರೀ ಸೋಮೇಶ್ ಮತ್ತು ಚೇತನ, ವಿಐಎಸ್‌ಎಲ್‌ನಿಂದ ಶ್ರಿ ಅಲೆನ್ ಪಿಂಟೋ, ಶ್ರೀಮತಿ ಪುಷ್ಪಲತಾ, ಶ್ರೀ ಮೋಹನ್, ಶ್ರೀ ನವೀನ್, ಶ್ರೀ ಉಮೇಶ್, ಶ್ರೀ ರಮೇಶ್ ಮತ್ತು ಶ್ರೀ ಎಮ್.ಎಲ್. ಯೋಗೀಶ್, ಕಿರಿಯ ಅಧಿಕಾರಿ (ಮಾನವ ಸಂಪನ್ಮೂಲ) ಸಹಕಾರ ನೀಡಿದರು. ವಿಐಎಸ್‌ಎಲ್‌ನ ಮಾನವ ಸಂಪನ್ಮೂಲ ಇಲಾಖೆ, ಆಸ್ಪತ್ರೆ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಈ ಶಿಬಿರವನ್ನು ಸಂಯೋಜಿಸಿದ್ದವು. ಈ ಕಾರ್ಯಕ್ರಮದ ಆಯೋಜನೆಯ ಮೇಲುಸ್ತುವಾರಿಯನ್ನು ವಿಐಎಸ್ ಎಲ್ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿ ಡಾ|| ಸುಜೀತ್ ಕುಮಾರ್ ಮತ್ತು ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಹೆಚ್. ಆರ್ ಮತ್ತು ಸಾರ್ವಜನಿಕ ಸಂಪರ್ಕ) ವಹಿಸಿದ್ದರು.
