Shivamogga Police ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ವೀರಭದ್ರ ಟಾಕೀಸ್ ಎದುರನ ಫುಟ್‌ಪಾತ್ ಮೇಲೆ ಸುಮಾರು 45-50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೈಕಾಲು ತಿರುವಿಕೊಂಡು ಅಸ್ವಸ್ಥರಾಗಿ ಬಿದ್ದಿದ್ದು, ಆತನನ್ನು ಸಾರ್ವಜನಿಕರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅ.09 ರಂದು ಮೃತ ಪಟ್ಟಿರುತ್ತಾರೆ. ಈತನ ಹೆಸರು, ವಿಳಾಸ ಹಾಗೂ ವಾರಸುದಾರರ ಬಗ್ಗೆ ಯಾವುದೇ ಸುಳಿವು ದೊರತಿಲ್ಲ.
ವ್ಯಕ್ತಿಯು ಸುಮಾರು 5.10 ಅಡಿ ಎತ್ತರವಿದ್ದು, ಕೋಲು ಮುಖ, ತೆಳ್ಳನೆಯ ಮೈಕ್ಟು, ಎಣ್ಣೆಗೆಂಪು ಬಣ್ಣ ಹೊಂದಿರುತ್ತಾನೆ. ಬಲಗೈ Shivamogga Police ತೋಳಿನ ಮೇಲೆ “ಇಂದ್ರ” ಎಂಬ ಕನ್ನಡ ಅಕ್ಷರದ ಮತ್ತು ಸೂರ್ಯನ ಚಿತ್ರವುಳ್ಳ ಟ್ಯಾಟೂ ಇರುತ್ತದೆ. ಮೈಮೇಲೆ ಬಿಳಿ ಮತ್ತು ಸಿಮೆಂಟ್ ಬಣ್ಣದ ಟೀಶರ್ಟ್ ಮತ್ತು ನೀಲಿ ಬಣ್ಣದ ಬರ್ಮುಡಾ ಚಡ್ಡಿ ಧರಿಸಿರುತ್ತಾರೆ. ಹೊಟ್ಟೆಯ ಮೇಲೆ ಸುಮಾರು 8 ಇಂಚಿನ ಉದ್ದದ ಅಪರೇಷನ್ ಆಗಿರುವ ಗಾಯದ ಗುರುತು ಇರುತ್ತದೆ.
ಈ ಮೃತ ವ್ಯಕ್ತಿಯ ವಾರಸುದಾರರ ಸುಳಿವು ದೊರೆತಲ್ಲಿ ಕೋಟೆ ಪೊಲೀಸ್ ಠಾಣೆಗೆ ದೂ.ಸಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Shivamogga Police ಅನಾಮಧೇಯ ಮೃತವ್ಯಕ್ತಿಯ ದೇಹಪತ್ತೆ. ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ಪ್ರಕಟಣೆ
Date:
