B. Y. Raghavendra ಸನ್ಮಾನ್ಯ ಪ್ರಿಯಾಂಕ ಖರ್ಗೆ ಅವರೇ, ಪ್ರಚಾರಕ್ಕಾಗಿ ಆರೆಸ್ಸೆಸ್ ಹಿಂದೆ ಹೋಗುವ ಬದಲು ನಿಮ್ಮ ಜಿಲ್ಲೆಯಲ್ಲಿನ ಸಮಸ್ಯೆಗಳ ಪರಿಹಾರದ ಬಗ್ಗೆ ಯೋಚಿಸಿ.
ಕೇಂದ್ರ ಸರ್ಕಾರವು ಉಡಾನ್ ಯೋಜನೆಯಡಿ ನಿರ್ಮಿಸಿದ್ದ ಕಲಬುರಗಿ ವಿಮಾನ ನಿಲ್ದಾಣವು ನಿಮ್ಮ ವೈಫಲ್ಯದಿಂದ ಮುಚ್ಚುವ ಸ್ಥಿತಿ ಎದುರಿಸುತ್ತಿದೆ.
B. Y. Raghavendra ಹಲವು ದಶಕಗಳ ಕಾಲ ನಿಮ್ಮ ಕುಟುಂಬ ಜಿಲ್ಲೆಯನ್ನು ಆಳಿದರೂ, ಕಲಬುರಗಿ ಜಿಲ್ಲೆಗೆ ಹೂಡಿಕೆಯನ್ನು ತರುವಲ್ಲಿ, ಕಂಪೆನಿಯನ್ನು ತಂದು ಜನರ ಜೀವನ ಗುಣಮಟ್ಟವನ್ನು ಸುಧಾರಿಸಿ ತಲಾದಾಯ ಹೆಚ್ಚಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಿಮ್ಮ ಈ ನಿರ್ಲಕ್ಷ್ಯದಿಂದಾಗಿ ಕಲ್ಯಾಣ ಕರ್ನಾಟಕವು ಇಂದು ಅವಕಾಶ ವಂಚಿತವಾಗುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸಚಿವ ಖರ್ಗೆ ಅವರಿಗೆ ತೀವ್ರ
ವಾಗ್ಬಾಣ ಎಸೆದಿದ್ದಾರೆ.
