Friday, December 5, 2025
Friday, December 5, 2025

Karnataka Rakshana Vedike ಶಿವಮೊಗ್ಗ ಇಎಸ್ಐ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ವಿರುದ್ದ ಕರವೇ ಸ್ವಾಭಿಮಾನಿ ಬಣದಿಂದ ದೂರು ಸಲ್ಲಿಕೆ

Date:

Karnataka Rakshana Vedike ಶಿವಮೊಗ್ಗದ ಕಾರ್ಮಿಕರು ಪ್ರಗತಿಪರರು ಸಂಘಗಳ ಹೋರಾಟದ ಫಲವಾಗಿ ಬಹುಕಾಲದ ಬೇಡಿಕೆಯಂತೆ ಕಡುಬಡವ ಕಾರ್ಮಿಕರ ಆರೋಗ್ಯ ಉಚಿತ ತಪಾಸಣೆಗೆಂದು ಶಿವಮೊಗ್ಗದ ವಿನೋಬನಗರ ಸವಿ ಬೇಕರಿ ಮುಂಭಾಗದಲ್ಲಿ ಬಿ ಎಚ್ ರಸ್ತೆಯಲ್ಲಿ ಹಾಗೂ ಎಂಟಿ ರಸ್ತೆಯಲ್ಲಿ ಇಎಸ್ಐ ಆಸ್ಪತ್ರೆಯನ್ನು ಪ್ರಾರಂಭಿಸಲಾಯಿತು. ಇದರ ಉದ್ದೇಶ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ಮತ್ತು ಸಮಯೋಚಿತ ಸೇವೆಗಳನ್ನು ಪಡೆಯುವ ಉದ್ದೇಶಗಳಿಂದ ಸರ್ಕಾರ ಪ್ರಾರಂಭಿಸುತ್ತದೆ ಆದರೆ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಮಲತಾಯಿ ಧೋರಣೆಯಿಂದ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದೇ ವಂಚಿತರಾಗಿರುತ್ತಾರೆ ಆ ಸಮಸ್ಯೆಗಳು ಎಂದರೆ
1) ಸಮಯ-ಇಎಸ್ಐ ಆಸ್ಪತ್ರೆಯ ಸರ್ಕಾರದ ಸುತ್ತೋಲೆಯಂತೆ ಬೆಳಗ್ಗೆ 9:00 ರಿಂದ ಸಂಜೆ 4 ಗಂಟೆಯವರೆಗೆ ಸಮಯ ನಿಗದಿಯಾಗಿದ್ದರು ಸಹ ಈ ಆಸ್ಪತ್ರೆಗಳು ಪ್ರಸ್ತುತ ಬೆಳಗ್ಗೆ 9 ರಿಂದ 1 ಗಂಟೆಯವರೆಗೆ ಮುಚ್ಚಿ ಸಂಜೆ 5 ಗಂಟೆಯಿಂದ 6:30ರ ನಂತರ ಮುಚ್ಚಲ್ಪಡುತ್ತದೆ
2) ಸಿಸಿ ಕ್ಯಾಮೆರಾ -ಇಎಸ್ಐ ಆಸ್ಪತ್ರೆಯ ಮುಖ್ಯದ್ವಾರ ಓ ಪಿ ಡಿ ಸ್ಥಳ ಹಾಗೂ ಔಷಧಿ ಕೊಡುವ ಸ್ಥಳಗಳಲ್ಲಿ ಮತ್ತು ಔಷಧಿ ಸಂಗ್ರಹಿಸಿರುವ ಉಗ್ರಾಣ ದಲ್ಲೂ ಸಹ ಸಿಸಿ ಕ್ಯಾಮೆರಾ ಅಳವಡಿಸಬೇಕು ಅಲ್ಲಿ ಸಿಬ್ಬಂದಿಗಳ ಅನುಚಿತ ವರ್ತನೆಯನ್ನು ದಾಖಲಾಗದ ಹಾಗೆ ನೋಡಿಕೊಳ್ಳುವುದೇ ಇದ್ದಿದ್ದು ಸಹ ಕಾನೂನು ಬಾಹಿರವಾಗುತ್ತದೆ
3) ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳ ನಾಮಫಲಕ- ಈ ಆಸ್ಪತ್ರೆಯಲ್ಲಿ ಪ್ರಸ್ತುತವಾಗಿ ಯಾವ ವೈದ್ಯಾಧಿಕಾರಿಗಳು ಹಾಗೂ ಈ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳ ನಾಮಫಲ ಪ್ರದರ್ಶನ ಮಾಡದೆ ಇರುವುದು ಕಾನೂನು ಉಲ್ಲಂಘನೆ ಆಗಿರುತ್ತದೆ
4) ರನ್ನಿಂಗ್ ಲೆಟರ್ ನೀಡುವುದರಲ್ಲಿ ಅವ್ಯವಸ್ಥೆ- ಒಬ್ಬ ಕಾರ್ಮಿಕ ತನ್ನ ತುರ್ತು ಚಿಕಿತ್ಸೆ ಎಂದು ಈ ಇಲಾಖೆಯಿಂದ ರನ್ನಿಂಗ್ ಲೆಟರ್ ಪಡೆದರೆ ಮಾತ್ರ ಆತನ ಆತನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅರನ್ ಆಗಿರುತ್ತಾನೆ. ಆದರೆ ಇವರು ಸರಿಯಾದ ಸಮಯ ಸಮಯವನ್ನು ನಿಗದಿ ಮಾಡದೆ ದೂರದೂರಿನಿಂದ ಬರುವವರಿಗೆ ರನ್ನಿಂಗ್ ಲೆಟರ್ ಪಡೆಯಲು ತೊಂದರೆ ಆಗಿರುತ್ತದೆ
5) ಮೂಲಭೂತ ಸೌಕರ್ಯ -ಶಿವಮೊಗ್ಗದ ಈ ಮೂರು ಆಸ್ಪತ್ರೆಯಲ್ಲಿ ಕಾರ್ಮಿಕ ರೋಗಿಗಳಿಗೆ ಸರಿಯಾದ ಆಸನದ ವ್ಯವಸ್ಥೆ ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಆಗಲಿ ಶೌಚಾಲಯದ ವ್ಯವಸ್ಥೆಯಾಗಲಿ, ಮಕ್ಕಳಿಗೆ ಹಾಲುಣಿಸುವ ಪ್ರತ್ಯೇಕ ಕೊಠಡಿಯಲ್ಲಿ ಇರುವುದಿಲ್ಲ ಇದರಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ
6) ಬಯೋಮೆಟ್ರಿಕ್ /ಹಾಜರಾತಿ- ಇಲ್ಲಿನ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್/ ಹಾಜರಾತಿ ಇಲ್ಲದೆ ಇಲ್ಲಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಇಷ್ಟ ಬಂದ ಸಮಯಕ್ಕೆ ಬಂದು ಹೋಗುವುದನ್ನು ಮಾಡುತ್ತಾರೆ ಆದರೆ ಕೆಲವು ವೈದ್ಯಾಧಿಕಾರಿಗಳು ಅಪರೂಪಕ್ಕೆ ಬರುವ ವ್ಯವಸ್ಥೆ ಇಲ್ಲಿ ಇರುತ್ತದೆ
7) ಆಸ್ಪತ್ರೆಯ ನಾಮಫಲಕ- ಶಿವಮೊಗ್ಗದ ಇ ಎಸ್ ಐ ನ ಕೆಲವು ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ಗೊತ್ತಾಗುವ ಹಾಗೆ ಆಸ್ಪತ್ರೆಯ ಬೋರ್ಡ್. ಕಾರ್ಮಿಕರಿಗೆ ಸೌಲಭ್ಯದ ಬಗ್ಗೆ ಮಾಹಿತಿ ಹಾಕದಿರುವುದು ಇದರಿಂದ ತೊಂದರೆಯಾಗುತ್ತದೆ
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಪ್ರತಿ ತಾಲೂಕು ಗಳಲ್ಲಿಯೂ ಸುಸಜ್ಜಿತವಾದ ಈಎಸ್ಐ ಆಸ್ಪತ್ರೆಗಳನ್ನು ನಿರ್ಮಿಸಬೇಕೆಂದು ಆಯುಕ್ತರು ಕಾರ್ಮಿಕರ ರಾಜ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಬೆಂಗಳೂರು ಸಂಘಟನೆ ಆಗ್ರಹಿಸುತ್ತದೆ ಒಂದು ಪಕ್ಷ ಈ ನಮ್ಮ ಮೇಲಿನ ಬೇಡಿಕೆಗಳು ಸರಿಪಡಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಮುಂಭಾಗದಲ್ಲಿ Karnataka Rakshana Vedike ಅಹೋ ರಾತ್ರಿ ಧರಣಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸುತ್ತದೆ ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಯುವ ಘಟಕದ ಅಧ್ಯಕ್ಷರಾದ ಸಂತೋಷ್ ಗ್ರಾಮಾಂತರ ಅಧ್ಯಕ್ಷರಾದ ಮಂಜುನಾಥ್ ಜಿಲ್ಲಾ ಕಾರ್ಯದರ್ಶಿ ರಾಮು ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ ಉಪಾಧ್ಯಕ್ಷರಾದ ಪದ್ಮ ಸಂಘಟನಾ ಕಾರ್ಯದರ್ಶಿಯಾದ ಜ್ಯೋತಿ ನಗರ ಅಧ್ಯಕ್ಷರಾದ ಜೀವನ್ ನಗರ ಕಾರ್ಯಾಧ್ಯಕ್ಷರಾದ ನಾಗರಾಜ್ ಪ್ರಶಾಂತ್ ನೂರುಲ್ಲಾ ಯುವ ನಗರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಎಚ್ಎಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾಲತೇಶ ಎನ್ ಮುಂತಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...