Yuvajanate ಯುವಜನತೆ ದೇಶದ ಶಕ್ತಿ ಮತ್ತು ಸಂಪತ್ತು. ದೇಶದ ಅಭಿವೃದ್ದಿಯಲ್ಲಿ ಇವರ ಪಾತ್ರ ಬಹು ಮುಖ್ಯವಾಗಿದ್ದು ನಮ್ಮ ಯುವಜನತೆ ಸದಾ ಸಕ್ರಿಯರಾಗಿರಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದÀ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ಯುವಜನತೆಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ, ಮೇರಾ ಯುವ ಭಾರತ್ ಹಾಗೂ ಎನ್ ಎಸ್ ಎಸ್ ಘಟಕಗಳು ಶಿವಮೊಗ್ಗ ಇವರ ಸಹಯೋಗದಲ್ಲಿ ಬುಧವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಸದಾ ಉತ್ಸುಕರಾಗಿ, ಜಾಗೃತರಾಗಿರಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಎಲ್ಲ ರಂಗಗಳಲ್ಲಿ ಸದಾ ಚಟುವಟಿಕೆಯಿಂದಿರಬೇಕು. ಹಾಗೂ ಚಿಂತನಶೀಲರಾಗಿರಬೇಕು.
‘ಏಳಿ, ಎದ್ದೇಳಿ, ಗುರು ಮುಟ್ಟುವವರೆಗೆ ನಿಲ್ಲದಿರಿ’ ಎಂಬ ಸ್ವಾಮಿವಿವೇಕಾನಂದರವರ ನುಡಿಯಂತೆ ಯುವಕರು ಎಚ್ಚೆತ್ತುಕೊಂಡು ಗುರಿ ಮುಟ್ಟುವವರೆಗೆ ಸಾಗಬೇಕು. ದೇಶ ಅಭಿವೃದ್ಧಿ ಕಾಣಬೇಕಾದರೆ ಯುವಜನತೆ ಪಾತ್ರ ಬಹಳ ಮುಖ್ಯ. ಅವರÀ ಧ್ವನಿಗೆ ಬಹಳ ಶಕ್ತಿ ಮತ್ತು ಮಹತ್ವ ಇದೆ. ಇಂದು ಇಡೀ ಜಗತ್ತು ನಮ್ಮ ದೇಶವನ್ನು ಗಮನಿಸುತ್ತಿದೆ. ಇದಕ್ಕೆ ಕಾರಣ ನಮ್ಮ ಯುವಜನತೆ ಎಂದ ಅವರು ಯುವಜನತೆ ಇಂದಿನ ಯುವಜನೋತ್ಸವದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉನ್ನತ ಮಟ್ಟಕ್ಕೆ ಆಯ್ಕೆಯಾಗಬೇಕೆಂದು ಹಾರೈಸಿದರು.
Yuvajanate ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಮಾತನಾಡಿ, ಯುವಜನತೆ ಅತಿ ಉತ್ಸಾಹದಿಂದ ಯುವಜನೋತ್ಸವದಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯಿಂದ ರಾಜ್ಯ, ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿಯನ್ನು ತರಬೇಕೆಂದು ಹಾರೈಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಮೇರಾ ಯುವ ಭಾರತ್‌ನ ಅಧಿಕಾರಿ ಹೇಮಲತಾ, ಇತರೆ ಅಧಿಕಾರಿಗಳು, ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.
ಯುವ ಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಕಥೆ ಬರೆಯುವುದು, ಚಿತ್ರಕಲೆ, ಭಾಷಣ ಮತ್ತು ಕವಿತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
Yuvajanate ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಬಹಳ ಮುಖ್ಯ- ಸಿ.ಎಸ್.ಚಂದ್ರಭೂಪಾಲ್
Date:
