JCI Shivamogga ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಗಣ್ಯರನ್ನು ಸನ್ಮಾನಿಸುವುದು ಸಂಘ ಸಂಸ್ಥೆಗಳ ಆದ್ಯ ಕರ್ತವ್ಯ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಹೇಳಿದರು.
ಜೆಸಿಐ ಸಹ್ಯಾದ್ರಿ ಘಟಕದ ವತಿಯಿಂದ ಜೆಸಿ ಸಪ್ತಾಹದ ಅಂಗವಾಗಿ ಶ್ರೀಧಾತ್ರಿ ಭವನದಲ್ಲಿ ಹಮ್ಮಿಕೊಳ್ಳಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಜೆಸಿಐ ಸಂಸ್ಥೆ ವತಿಯಿಂದ ಪ್ರತಿ ವರ್ಷ ವಿವಿಧ ಇಲಾಖೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಹಾಗೂ ಕಾರ್ಮಿಕರಿಗೆ ಕೊಡುವ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಹಾಗೂ ಬಿ ಟೂ ಬಿ ಪ್ರಶಸ್ತಿಗೆ ಭಾಜನರಾದ ನ್ಯಾನೋ ಟೆಕ್ ಫೋಟೋ ಸ್ಟುಡಿಯೋದ ಮಾಲೀಕ ವಿಜಯಕುಮಾರ್, ಸೇವಾಲಾಲ್ ಎಣ್ಣೆ ಗಾಣದ ಮಾಲೀಕ ಸಂತೋಷ್, ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ಮಾರ್ಕೆಟಿಂಗ್ ಹೆಡ್ ಆಶಾ ಹಾಗೂ ಪೋಸ್ಟ್ ವುಮನ್ ಆಗಿ 20 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಪೂರ್ಣಿಮ ಗುಜ್ಜಾರ್ ಅವರ ಸೇವೆ ಗುರುತಿಸಿ ವಿಶೇಷ ಪ್ರಶಸ್ತಿ ನೀಡಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವೃತ್ತಿಯಲ್ಲಿ ವಿಶೇಷವಾಗಿ ಸಾರ್ಥಕ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜಕ್ಕೆ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಿದರೆ ಸಂಸ್ಥೆಯ ಗೌರವ ಹೆಚ್ಚುತ್ತದೆ ಎಂದು ಹೇಳಿದರು.
ಸನ್ಮಾನಿತರಾದ ವಿಜಯಕುಮಾರ್ ಮಾತನಾಡಿ, ನಮ್ಮ ವೃತ್ತಿ ಸೇವೆಯನ್ನು ಗುರುತಿಸಿ ನೀಡಿದಂತಹ ಶ್ರೇಷ್ಠ ಪ್ರಶಸ್ತಿ ನಮಗೆ ಸಂತಸ ತಂದಿದೆ ಎಂದು ಹೇಳಿದರು.
JCI Shivamogga ಜೆಸಿಐ ವಲಯ ಉಪಾಧ್ಯಕ್ಷ ಬೇಸಿಗೆರೆ ಮಾತನಾಡಿ, ವೃತ್ತಿಯ ಜೊತೆಗೆ ನಮ್ಮ ಒಳ್ಳೆಯ ಪ್ರವೃತ್ತಿಯು ಬಹಳ ಮುಖ್ಯ. ಸಮಾಜದಲ್ಲಿ ನಮ್ಮ ವೃತ್ತಿಯಲ್ಲಿ ಸಾರ್ಥಕ ಸೇವೆ ಜೊತೆಗೆ ಮನುಕುಲದ ಸೇವೆಯು ಮುಖ್ಯ ಎಂದು ತಿಳಿಸಿದರು.
ಜೆಸಿಐ ಸಂಸ್ಥೆಯ ಪ್ರಮುಖರಾದ ಮಹದೇವಸ್ವಾಮಿ, ಸತೀಶ್ ಚಂದ್ರ, ಇನ್ನರ್ ವೀಲ್ ಸಂಸ್ಥೆ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ವೀಣಾ ಕಿಶೋರ್, ಹರೀಶ್, ಕರುಣಾಕರ್, ಶಿಲ್ಪ, ಸುಪ್ರಿಯಾ, ಉಮಾ, ಸಂಧ್ಯಾ ಇತರರಿದ್ದರು. ನಂತರ ಸದಸ್ಯರಿಂದ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ಸವಿನೆನಪು ನಡೆಯಿತು.
JCI Shivamogga ಸಾರ್ಥಕ ಸೇವೆ ಸಲ್ಲಿಸುವವರನ್ನು ಸನ್ಮಾನಿಸುವುದು ಸಂಘ ಸಂಸ್ಥೆಗಳ ಕರ್ತವ್ಯ
Date:
