Kannada Book Authority ಕನ್ನಡ ಪುಸ್ತಕ ಪ್ರಾಧಿಕಾರದ ನೇತೃತ್ವದಲ್ಲಿ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯ ಹಾಗೂ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ನನ್ನ ಮೆಚ್ಚಿನ ಪುಸ್ತಕ ” ಕಾರ್ಯಕ್ರಮವು ಆಯಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ತಾಪಕರ ಸಹಕಾರದೊಂದಿಗೆ ಅರ್ಥಪೂರ್ಣ ವಾಗಿ ಜರುಗಿತು. ವಿದ್ಯಾರ್ಥಿಗಳು ತಮ್ಮ ಇಷ್ಟದ ಲೇಖಕ ಲೇಖಕಿಯರ ಒಂದು ಕೃತಿಯನ್ನು ಆಯ್ಸುಕೊಂಡು…ಓದಿಕೊಂಡು ಬಂದು ಆ ಕೃತಿಯ ಬಗ್ಗೆ ತಮ್ಮ ಗ್ರಹಿಕೆ,ವಿಮರ್ಶೆ ಮೆಚ್ಚುಗೆ ಎಲ್ಲವನ್ನು ಮಂಡಿಸಿದರು. Kannada Book Authority ಬಹುತೇಕ ಮಕ್ಕಳ ತಯಾರಿಯಂತೂ ಶ್ರಮ, ಶ್ರದ್ದೆ ಅವರಮಾತುಗಳಲ್ಲಿ ವ್ಯಕ್ತವಾಗುತಿತ್ತು. ವಿವೇಚನೆಯಿಂದ ಮಕ್ಕಳು ಪುಸ್ತಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಆಹ್ವಾನ ಪತ್ರಿಕೆಯಲ್ಲಿ ಆಯ್ಕೆ ಮಾಡಿಕೊಂಡ ಪುಸ್ತಕ ಪಟ್ಟಿ ಓದಿದರೆ ಯಾರಿಗೂ ತಿಳಿವಂತಿದೆ… ಕುವೆಂಪು, ಶಿವರಾಮಕಾರಂತ, ತೇಜಸ್ವಿ, ದೇವನೂರು ಅವರ ಪುಸ್ತಕಗಳ ಬಗೆಗೆ ಮಕ್ಕಳ ವಿಶ್ಲೇಷಣಾಭರಿತ ಮಾತುಗಳನ್ನು ಕೇಳುವಂತಾಗಿದ್ದು, ವಿಶೇಷವಾಗಿತ್ತು.
Kannada Book Authority ತುಂಗಾ ಮಹಾವಿದ್ಯಾಲಯ ಹಾಗೂ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ನನ್ನ ಮೆಚ್ಚಿನ ಪುಸ್ತಕ ” ಕಾರ್ಯಕ್ರಮ
Date:
