National Horticulture Mission 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ “ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ/ಕೀಟ ನಿಯಂತ್ರಣ” ಕಾರ್ಯಕ್ರಮದಡಿ ಜೈವಿಕ ಗೊಬ್ಬರವಾದ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಮ್ (ಎಎಂಸಿ) ಪರಿಕರವನ್ನು ಅರ್ಹ ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅರ್ಹ ರೈತರಿಂದ ನೋಂದಣಿ ಆಹ್ವಾನಿಸಿದೆ.
ಆಸಕ್ತ ರೈತರು ಪಹಣಿ, ಆಧಾರ ಮತ್ತು ಬ್ಯಾಂಕ್ ಪಾಸ್‌ಬುಕ್, ಎಸ್‌ಸಿ/ಎಸ್‌ಟಿ ರೈತರು ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರ ನಕಲುಗಳೊಂದಿಗೆ ಸಹಾಯಕ ತೋಟಗಾರಿಕೆ ಕಚೇರಿಯನ್ನು ಸಂಪರ್ಕಿಸಿ.
National Horticulture Mission ಹೆಚ್ಚಿನ ಮಾಹಿತಿಗಾಗಿ ದೂ,ಸಂ: ಕಸಬಾ ಹೋಬಳಿಯ ಅಧಿಕಾರಿ ಪ್ರಿಯಾಂಕ-9113812090, ಅಂಜನಾಪುರ ಹೋಬಳಿಯ ಅಧಿಕಾರಿ ದೊರೆರಾಜ್-8861994178, ಉಡುಗಣಿ ಹೋಬಳಿಯ ಅಧಿಕಾರಿ ಅಶೋಕ ಎಂ.ಸಿ-9108548454, ಹೊಸೂರು ಹೋಬಳಿಯ ಅಧಿಕಾರಿ ಶರತ್-6363095898, ತಾಳಗುಂದ ಹೋಬಳಿಯ ಅಧಿಕಾರಿ ರುದ್ರೇಶ್-7975515575 ಗೆ ಸಂಪರ್ಕಿಸಬಹುದೆAದು ಶಿಕಾರಿಪುರದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಸಾಮಾನ್ಯ, ಎಸ್‌ಸಿ/ಎಸ್‌ಟಿ ರೈತರಿಗೆ ಎಎಂಸಿ ವಿತರಣೆ ಕಾರ್ಯಕ್ರಮ ಆಯೋಜನೆ
Date:
