Friday, December 5, 2025
Friday, December 5, 2025

IMA Shivamogga ಸೆರೆಬ್ರಲ್ ಪಾಲ್ಸಿಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಚಿಕಿತ್ಸೆಗೆ ಬಹಳ ಮುಖ್ಯ : ಡಾ. ಯತೀಶ್

Date:

IMA Shivamogga ಸೆರೆಬ್ರಲ್ ಪಾಲ್ಸಿಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಚಿಕಿತ್ಸೆಗೆ ಬಹಳ ಮುಖ್ಯ ಎಂದು ಭಾರತೀಯ ಮಕ್ಕಳ ಅಕಾಡೆಮಿ ಶಿವಮೊಗ್ಗ ಅಧ್ಯಕ್ಷ ಡಾ. ಯತೀಶ್ ಹೇಳಿದರು.

ಐಎಂಎ ಶಿವಮೊಗ್ಗ ವತಿಯಿಂದ ಭಾರತೀಯ ಮಕ್ಕಳ ಸಂಘದ ಸಹಯೋಗದಲ್ಲಿ ಧೀಮಹಿ ಮಕ್ಕಳ ಅಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸೆರೆಬ್ರಲ್ ಪಾಲ್ಸಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಸೆರೆಬ್ರಲ್ ಪಾಲ್ಸಿ ಲಕ್ಷಣಗಳನ್ನು ನಿಯಂತ್ರಿಸಲು ಹಾಗೂ ಜೀವನ ಗುಣಮಟ್ಟವನ್ನು ಸುಧಾರಿಸಲು ಬದಲಾವಣೆಗಳನ್ನು ತರಬಹುದಾಗಿದೆ ಎಂದು ತಿಳಿಸಿದರು.

ಸೆರೆಬ್ರಲ್ ಪಾಲ್ಸಿಯೊಂದಿಗೆ ವಾಸಿಸುವವರ ವೈವಿಧ್ಯಮಯ ಅನುಭವಗಳನ್ನು ಗುರುತಿಸಿ ಮತ್ತು ಅವರು ಅಭಿವೃದ್ಧಿ ಹೊಂದಲು ಅಧಿಕಾರ ನೀಡುವ ಮೂಲಕ ಹೆಚ್ಚು ಒಳಗೊಳ್ಳುವ ಮತ್ತು ಸಮಾನವಾದ ಜಗತ್ತನ್ನು ಸೃಷ್ಟಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸೆರೆಬ್ರಲ್ ಪಾಲ್ಸಿಗೆ ಸಂಬಂಧಿಸಿದ ಸಮಸ್ಯೆಗಳು, ಫಿಸಿಯೋಥೆರಪಿ ಮತ್ತು ತರಬೇತಿಯಂತಹ ವಿಷಯಗಳು ಕಾರ್ಯಕ್ಷಮತೆಯನ್ನು ಹೇಗೆ ಸುಧಾರಿಸಬಹುದು ಎಂಬುದರ ಕುರಿತು ವಿವರಿಸಿದರು.

ಐಎಂಎ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಮಾತನಾಡಿ, ಪೋಷಕರು ಸೆರೆಬ್ರಲ್ ಪಾಲ್ಸಿ ಎಂದಾಕ್ಷಣ ಹೆದರದೇ, ಒತ್ತಡಕ್ಕೆ ಒಳಗಾಗದೇ ಮಗುವಿಗೆ ತರಬೇತಿ ನೀಡುವುದು ತುಂಬಾ ಅಗತ್ಯ. ವೈದ್ಯರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವುದು. ವಿಶೇಷ ಶಿಕ್ಷಣ ಮತ್ತು ಚಿಕಿತ್ಸಾ ಮಾರ್ಗಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.

IMA Shivamogga ಐಎಂಎ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಡಾ. ರಾಜರಾಮ್.ಯು.ಹೆಚ್, ಐಎಂಎ, ಐಎಪಿ ಗಣ್ಯರು ಮತ್ತು ಪೋಷಕರು ಮಕ್ಕಳೊಂದಿಗೆ ಉಪಸ್ಥಿತರಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಸ್ಯೆಗಳಿಗೆ ಉತ್ತರ ಮತ್ತು ಮಾಹಿತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...