Indian Medical Association Shivamogga ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಶಿವಮೊಗ್ಗ ಶಾಖೆ ನೂತನ ಅಧ್ಯಕ್ಷರಾಗಿ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿಯಾಗಿ ಡಾ. ಕೆ.ಎಸ್.ಶುಭ್ರತಾ ಹಾಗೂ ಖಜಾಂಚಿಯಾಗಿ ಡಾ. ಎಚ್.ಎಲ್.ಶಶಿಧರ್ ಅಧಿಕಾರ ವಹಿಸಿಕೊಂಡರು.
2025-26ನೇ ಸಾಲಿನ ಹೊಸ ಕಾರ್ಯಕಾರಿ ಮಂಡಳಿ ಆಯ್ಕೆಯ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ಬಿ.ಎ.ಸುಭಾಷ್, ಡಾ. ರಾಮಚಂದ್ರ ಬಾದಾಮಿ, ಸಹ ಕಾರ್ಯದರ್ಶಿಗಳಾಗಿ ಡಾ. ಎಂ.ಆರ್.ಸತೀಶ್, ಡಾ. ರಾಕೇಶ್ ಬಿಸಿಲೇಹಳ್ಳಿ, ಮಹಿಳಾ ವೈದ್ಯ ಘಟಕದ ಅಧ್ಯಕ್ಷರಾಗಿ ಡಾ. ಕೌಸ್ತುಭ ಅರುಣ್ ಮತ್ತು ಕಾರ್ಯದರ್ಶಿಯಾಗಿ ಡಾ. ಶ್ವೇತ ಬಾದಾಮಿ ಅಧಿಕಾರ ವಹಿಸಿಕೊಂಡರು.
ಐಎಂಎ ಶಿವಮೊಗ್ಗ ಶಾಖೆಗೆ ರಾಜ್ಯಪ್ರಶಸ್ತಿ: ಐಎಂಎ ಶಿವಮೊಗ್ಗ ಶಾಖೆಯ ಅಮೃತ ವರ್ಷಾಚರಣೆ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ವರ್ಷಪೂರ್ತಿ ನಡೆಸಿದ ಉತ್ತಮ ಕಾರ್ಯಕ್ರಮಗಳಿಗಾಗಿ ರಾಜ್ಯ ಮಟ್ಟದಲ್ಲಿ ಮೊದಲ ಅತ್ಯುತ್ತಮ ಶಾಖೆ ಪ್ರಶಸ್ತಿ ಹಾಗು ಹೆಣ್ಣು ಮಗುವಿನ ಸುರಕ್ಷತೆಗಾಗಿ ನಡೆಸಿದ ಕಾರ್ಯಕ್ರಮಗಳಿಗೆ ಅತ್ಯುತ್ತಮ ಶಾಖೆ ಪ್ರಶಸ್ತಿಗಳನ್ನು ಪಡೆದಿದೆ.
Indian Medical Association Shivamogga ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ 2024-2025ರ ಅಮೃತ ಮಹೋತ್ಸವ ವರ್ಷದಲ್ಲಿ ಕಾರ್ಯನಿರ್ವಹಿಸಿ, ಪ್ರಶಸ್ತಿ ಗಳಿಸಿದ ಅಧ್ಯಕ್ಷ ಡಾ. ಎಸ್.ಶ್ರೀಧರ್, ಕಾರ್ಯದರ್ಶಿ ಡಾ. ವಿನಯ ಶ್ರೀನಿವಾಸ್, ಖಜಾಂಚಿ ಡಾ. ರಾಜರಾಮ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
